×
Ad

ಮಾ.29ರಂದು ಹೊಸ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ರಸಾಯನಶಾಸ್ತ್ರ ಮರುಪರೀಕ್ಷೆ

Update: 2016-03-23 14:19 IST

ಬೆಂಗಳೂರು, ಮಾ.23: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದಾಗಿ ಮಾರ್ಚ್‌ 29ರಂದು ಮರು ಪರೀಕ್ಷೆ ನಿಗದಿಯಾಗಿದ್ದು, ಹೊಸ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ  ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿದೆ. ಬೆಳಗ್ಗೆ 9 ಗಂಟೆಯಿಂದ  ಮಧ್ಯಾಹ್ನ 12 ಗಂಟೆ ತನಕ ಪರೀಕ್ಷೆ ನಡೆಯಲಿದೆ.
2012ಕ್ಕಿಂತ ಹಿಂದಿನ ಸಿಲೆಬಸ್‌ನ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ ಎಂದು ಪಿಯು ಶಿಕ್ಷಣ ಮಂಡಳಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News