ಮುದ್ದೇಬಿಹಾಳ ಬಿಇಒ ಎನ್ವಿ ಹೊಸೊರು ಸಸ್ಪೆಂಡ್
Update: 2016-03-24 13:10 IST
ಬೆಂಗಳೂರು, ಮಾ.24: ನಿಯಮ ಉಲ್ಲಂಘಿಸಿ ಹತ್ತನೆ ತರಗತಿ ಪ್ರಶ್ನೆ ಪತ್ರಿಕೆ ಸಾಗಾಟ ಮಾಡಿರುವ ಆರೋಪ ಎದುರಿಸುತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ವಿ ಹೊಸೊರು ಅವರನ್ನು ಪ್ರೌಢ ಶಿಕ್ಷಣ ಮಂಡಳಿ ಅಮಾನತುಗೊಳಿಸಿದೆ.
ಬಿಇಒ ಎನ್ವಿ ಹೊಸೊರು ಪ್ರಶ್ನೆ ಪತ್ರಿಕೆಯ ಕಟ್ಟನ್ನು ವಾಹನದಲ್ಲಿ ಬಿಟ್ಟು ಹೋಗಿ ಕರ್ತವ್ಯ ಲೋಪ ಎಸಗಿದ್ದಾರೆ . ಅವರು ತಪ್ಪು ಮಾಡಿರುವುದು ಸಾಬೀತಾಗಿದೆ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಯಶೋಧ ಬೋಪಣ್ಣ ತಿಳಿಸಿದ್ದಾರೆ.
ಮುದ್ದೇಬಿಹಾಳದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿಲ್ಲ. ಎಲ್ಲವೂ ಸುಸ್ಥಿತಿಯಲಿದೆ. ಎಂದು ಸ್ಪಷ್ಟಪಡಿಸಿದರು..