‘ಐಸ್ ಆ್ಯಂಡ್ ಸ್ಕೇಟ್’
Update: 2016-03-25 22:19 IST
ಐಸ್ ಆ್ಯಂಡ್ ಸ್ಕೇಟ್ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಆರಂಭಿಸಲಾದ ಸ್ಕೇಟಿಂಗ್ ಸಂಸ್ಥೆ. ವಿದೇಶದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಕ್ರೀಡೆಯಿದು.ಸಾಧಾರಣ ಸ್ಕೇಟಿಂಗ್ ನ ಬದಲಿಗೆ ಇಲ್ಲಿ ಮಾಡುವ ಸ್ಕೇಟಿಂಗ್ ವಿಶೇಷವಾಗಿರುತ್ತದೆ. ಮಂಜುಗಡ್ಡೆಯಲ್ಲಿ ಸ್ಕೇಟಿಂಗ್ ಮಾಡುವ ಮೋಜು ಇಲ್ಲಿ ಸ್ಕೇಟಿಂಗ್ ಮಾಡುವವರಿಗೆ ಸಿಗುತ್ತದೆ. ವಿಶಾಲವಾದ ಜಾಗದಲ್ಲಿ ಮಂಜುಗಡ್ಡೆಯನ್ನು ಹಾಕಲಾಗಿದ್ದು ಇಲ್ಲಿ ಹಿಮದ ರಾಶಿಯಲ್ಲಿ ಸ್ಕೇಟಿಂಗ್ ಮಾಡುವ ಅನುಭವವನ್ನು ನೀಡುತ್ತದೆ.ಮಂಜುಗಡ್ಡೆಯಲ್ಲಿ ಮಾಡುವ ಸ್ಕೇಟಿಂಗ್‌ಗೆ ಅನುಕೂಲವಿರುವ ಸ್ಕೇಟಿಂಗ್ ಶೂವನ್ನು ನೀಡಲಾಗುತ್ತದೆ. ಮಂಗಳೂರಿನಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಸ್ಕೇಟಿಂಗ್ ಪ್ರಿಯರಿದ್ದು ಇವರಿಗೆ ಇಲ್ಲಿ ಹೊಸ ಅನುಭವವನ್ನೆ ನೀಡಲಿದೆ.