ಪ್ರತ್ಯೇಕ ಘಟನೆ: ಇಬ್ಬರು ನೀರು ಪಾಲು
Update: 2016-03-25 22:22 IST
ಶಿವಮೊಗ್ಗ, ಮಾ. 25: ಶಿವಮೊಗ್ಗದಲ್ಲಿ ನಡೆದ ಪ್ರತ್ಯೇಕ ಟನೆಗಳಲ್ಲಿ, ಹೋಳಿ ಹಬ್ಬದ ದಿನದಂದು ಹೋಳಿಯಾಡಿದ ನಂತರ ಸ್ನಾನ ಮಾಡಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ವಿನಯ್ (21) ಮೃತ ಯುವಕ. ಇವರು ನಗರದ ತುಂಗಾ ನದಿಯಲ್ಲಿ ಈಜಾಡಲು ತೆರಳಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂಲತಃ ಹೊಸನಗರ ತಾಲೂಕು ಸಂಪೆ ಕಟ್ಟೆಯ ನಿವಾಸಿಯಾಗಿದ್ದ ಇವರು, ನಗರದ ಚನ್ನಪ್ಪ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಘಟನೆಯಲ್ಲಿ ತಾಲೂಕಿನ ಐಹೊಳೆ ಗ್ರಾಮದ ಬಾವಿಯಲ್ಲಿ ಈಜಾಡಲು ತೆರಳಿದ ತರುಣ್ ನಾಯಕ್ (12) ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈತ 7ನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.