ಕೃಷಿ ಫಸಲು ಆನ್‌ಲೈನ್ ಮೂಲಕ ಮಾರಾಟ 18 ಸಾವಿರ ರೈತರಿಂದ ಹೆಸರು ನೋಂದಣೆ
ಮಡಿಕೇರಿ,ಮಾ.26: ಜಿಲ್ಲೆಯಲ್ಲಿ ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ಆನ್‌ಲೈನ್ ಮೂಲಕ ರೈತರು ಕೃಷಿ ಬೆಳೆಗಳನ್ನು ಮಾರಾಟ ಮಾಡಲು ಆನ್‌ಲೈನ್ ವೇದಿಕೆಗೆ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 18 ಸಾವಿರ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ರೈತರ ನೆರವಿಗೆ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016-17ನೆ ಸಾಲಿನ ಬಜೆಟ್‌ನ ಆರಂಭದಲ್ಲಿಯೇ ಸರಕಾರದ ಪ್ರಗತಿಪರ ಕಾರ್ಯ ನೀತಿ ಮತ್ತು ಆಯವ್ಯಯ ಬೆಂಬಲದಿಂದಾಗಿ ಹಲವಾರು ರಾಷ್ಟ್ರೀಯ ಸಾಧನೆ ಮತ್ತು ಮನ್ನಣೆಗೆ ಕರ್ನ್ಟಾಕ ರಾಜ್ಯ ಪಾತ್ರವಾಗಿದೆ. ಸರಕಾರ ಕಳೆದ ವರ್ಷ ಜಾರಿಗೊಳಿಸಿದ ಕೃಷಿ ಮಾರುಕಟ್ಟೆಯ ಆನ್‌ಲೈನ್ ಹರಾಜು ಪದ್ಧತಿಯ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ಕೇಂದ್ರ ಸರಕಾರವು ಈ ವರ್ಷ ಇದನ್ನು ತನ್ನ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಅಳವಡಿಸಿಕೊಂಡಿದೆ.
ದೇಶಕ್ಕೆ ಮಾದರಿಯಾದ ಈ ಕಾರ್ಯಕ್ರಮವಾದ ಸರಾಂಶವೇನು?
ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ, ದಲ್ಲಾಳಿಗಳ ಕೈಯಲ್ಲಿ ನಲುಗಿ ಕಷ್ಟ ಜೀವನ ನಡೆಸುವ ರೈತರಿಗೆ ಸಾಧ್ಯವಾದಷ್ಟು ಕಾರ್ಯಕ್ರಮ ತಲುಪಿಸುವ ಯೋಜನೆ ಇದಾಗಿದೆ. ಈ ನಿಟ್ಟಿನಲ್ಲಿ ವಿದ್ಯುನ್ಮಾನ ವೇದಿಕೆಯ ಮೂಲಕ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕವಾದ, ನ್ಯಾಯಸಮ್ಮತವಾದ ಬೆಲೆ ದೊರಕಿಸಿಕೊಡುವ ಪ್ರಯತ್ನವೇ ಕೃಷಿ ಉತ್ಪನ್ನಗಳ ಮಾರಾಟ ಅರ್ಥಾತ್ ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟ.
ವರಿಸಿದೆ.