×
Ad

2.35 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ

Update: 2016-03-26 22:36 IST

ಶಿವಮೊಗ್ಗ, ಮಾ.26: ಶಿವಮೊಗ್ಗ ಮಹಾನಗರ ಪಾಲಿಕೆಯ 2016-17 ನೆ ಸಾಲಿನ ಬಜೆಟ್‌ನ್ನು ಶನಿವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ಮಂಡಿಸಿದರು. 2.35 ಕೋಟಿ ರೂ. ಉಳಿತಾಯದ ಬಜೆಟ್ ಇದಾಗಿರುವುದು ವಿಶೇಷವಾಗಿದೆ. ಪ್ರಸಕ್ತ ಸಾಲಿನಲ್ಲಿ 184 ಕೋಟಿ ರೂ. ಆದಾಯ ಸಂಗ್ರಹದ ಗುರಿಯಿಟ್ಟುಕೊಳ್ಳಲಾಗಿದೆ. 182.18 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಆದಾಯ-ಖರ್ಚು ಲೆಕ್ಕಾಚಾರ ಕಳೆದು 2.35 ಕೋಟಿ ರೂ. ಉಳಿತಾಯ ನಿರೀಕ್ಷಿಸಲಾಗಿದೆ. ನಾಗರಿಕರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಪಾಲಿಕೆಯ ಆದಾಯ ಮೂಲ ಹೆಚ್ಚಿಸುವ ಯೋಜನೆ ತಮ್ಮದಾಗಿದೆ ಎಂದು ಐಡಿಯಲ್ ಗೋಪಿ ತಿಳಿಸಿದರು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆ ತರಲು ಕ್ರಮ ಕೈಗೊಳ್ಳಲಾಗಿದೆ. ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲಾಗಿದೆ. ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ಶುಚಿತ್ವ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಸರ್ವಾಂಗೀಣ ಅಭಿವೃದ್ಧ್ದಿಗೆ ಹತ್ತು ಹಲವು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ವೆಚ್ಚದ ಬಾಬ್ತುಗಳು: ವೆಚ್ಚದ ವಿಭಾಗದಲ್ಲಿ ಪಾಲಿಕೆಯ ಆಡಳಿತ, ಸಿಬ್ಬಂದಿ ವೇತನ-ಭತ್ತೆಗಳಿಗೆ ಅತೀ ಹೆಚ್ಚಿನ ಅನುದಾನ ಖರ್ಚು ಮಾಡಲಾಗುತ್ತಿದೆ. ವೇತನ-ಭತ್ತೆ-ಇತರೆ ಸವಲತ್ತುಗಳಿಗೆ 330 ಲಕ್ಷ.ರೂ., ದಿನಗೂಲಿ ನೌಕರರ ವೇತನಕ್ಕೆ 60 ಲಕ್ಷ.ರೂ., ಅಂತ್ಯ ಮತ್ತು ನಿವೃತ್ತಿ ಸೌಲಭ್ಯಕ್ಕೆ 110 ಲಕ್ಷ.ರೂ., ಪಿಂಚಣಿಗೆ 1.2 ಲಕ್ಷ.ರೂ., ನೌಕರರ ವಂತಿಕೆ-ಪಿಂಚಣಿ ಪಾವತಿಗೆ 10 ಲಕ್ಷ.ರೂ., ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ 5 ಲಕ್ಷ.ರೂ., ಲೇಖನ ಸಾಮಗ್ರಿಗೆ 12 ಲಕ್ಷ.ರೂ., ಮುದ್ರಣಕ್ಕೆ 10 ಲಕ್ಷ.ರೂ., ನಿಯತಕಾಲಿಕೆ - ಬುಕ್ ಬೈಡಿಂಗ್‌ಗೆ 3 ಲಕ್ಷ.ರೂ., ಪ್ರಯಾಣ ಮತ್ತು ದಿನ ವೆಚ್ಚಕ್ಕೆ 5 ಲಕ್ಷ.ರೂ., ನ್ಯಾಯಾಂಗ ವೆಚ್ಚಕ್ಕೆ 15 ಲಕ್ಷ.ರೂ., ಕೋರ್ಟ್ ಅಟ್ಯಾಚ್‌ಮೆಂಟ್‌ಗೆ 80 ಲಕ್ಷ.ರೂ., ಜಾಹೀರಾತು - ಪ್ರಸರಣಕ್ಕೆ 50 ಲಕ್ಷ.ರೂ., ಕಚೇರಿಯ ಸಹಾಯವಾಣಿ ವೆಚ್ಚಕ್ಕೆ 4.5 ಲಕ್ಷ.ರೂ., ಸದಸ್ಯರ ಅಧ್ಯಯನ ಪ್ರವಾಸಕ್ಕೆ 20 ಲಕ್ಷ.ರೂ., ಸದಸ್ಯರ ಗೌರವ ಧನ 15 ಲಕ್ಷ.ರೂ., ಜನಗಣತಿಗೆ 2 ಲಕ್ಷ.ರೂ., ಶಕ್ತಿ - ಇಂಧನಕ್ಕೆ 660 ಲಕ್ಷ.ರೂ., ಬೀದಿ ದೀಪದ ಹೊರ ಗುತ್ತಿಗೆ ನಿರ್ವಹಣಾ ವೆಚ್ಚ 180 ಲಕ್ಷ. ರೂ., ಬೀದಿ ನಾಯಿ - ಹಂದಿ - ಮಂಗಗಳ ನಿಯಂತ್ರಣಕ್ಕೆ 10 ಲಕ್ಷ.ರೂ., ಸೊಳ್ಳೆ ನಾಶಕ ಯಂತ್ರ - ಫಿನಾಯಿಲ್ ಇತರೆಗೆ 40 ಲಕ್ಷ.ರೂ., ಸ್ಮಶಾನ ನಿರ್ವಹಣೆಗೆ 50 ಲಕ್ಷ.ರೂ., ಘನತ್ಯಾಜ್ಯ ನಿರ್ವಹಣೆಗೆ 700 ಲಕ್ಷ.ರೂ. ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುದಾನ ಮೀಸಲಿರಿಸಲಾಗಿದೆ. ಆದಾಯ ನಿರೀಕ್ಷೆ:

ಪಾಲಿಕೆಯ ಸ್ವಂತ ಆದಾಯ ಸಂಗ್ರಹ ಮೂಲಗಳಲ್ಲಿ ಆಸ್ತಿ ತೆರಿಗೆಯಿಂದಲೇ ಅತೀ ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯಿಟ್ಟುಕೊಳ್ಳಲಾಗಿದೆ. ಉಳಿದಂತೆ ಎಸ್‌ಎಪ್‌ಸಿ ವೇತನ ಅನುದಾನದಿಂದ 1,500 ಲಕ್ಷ ರೂ., ವಾಣಿಜ್ಯ ಸಂಕೀರ್ಣಗಳಿಂದ 130.14 ಲಕ್ಷ ರೂ., ಕಟ್ಟಡ ಬಾಡಿಗೆಯಿಂದ 5 ಲ.ರೂ., ಗುತ್ತಿಗೆ ಬಾಡಿಗೆ (ವಾಣಿಜ್ಯ) 5 ಲ.ರೂ., ಮಾಹಿತಿ ಹಕ್ಕು ಕಾಯ್ದೆಯಡಿ 1 ಲ.ರೂ ಇನ್ನು ಹಲವು ಮೂಲಗಳಿಂದ ಆದಾಯ ಸಂಗ್ರಹಣೆಯ ಗುರಿಯಿಟ್ಟುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News