×
Ad

ಕುಡಿಯುವ ನೀರು ನೀಡುವಂತೆ ಅಧ್ಯಕ್ಷೆ ವಿರುದ್ಧ ಕೊಡಹಿಡಿದು ಪ್ರತಿಭಟನೆ

Update: 2016-03-27 22:14 IST

 ಕುಶಾಲನಗರ, ಮಾ.27: ಸಮೀಪದ ಮುಳ್ಳಸೋಗೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪಂಚಾಯತ್ ಅಧ್ಯಕ್ಷೆ ಎದುರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆೆ ಮಾಡಿದ ಘಟನೆ ವರದಿಯಾಗಿದೆ.
ಗೊಂದಿಬಸವನಹಳ್ಳಿ ಗ್ರಾಮದಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿದ್ದು, ಅದರಲ್ಲಿ 2,300ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಆ ಭಾಗದ ಜನರು ಕೂಲಿ ಕೆಲಸ ಮಾಡಿಕೊಂಡು ಜೀವನ ಕಳೆಯುತ್ತಿರುತ್ತಾರೆ.ಆದರೆ ಸರಕಾರದಿಂದ ಸಿಗುವ ಮೂಲಭೂತ ಸವಲತ್ತುಗಳು ಸಿಗದೆ ವಂಚಿತಗೊಳ್ಳುತ್ತಿದ್ದಾರೆ. ಜನರಿಗೆ ಮುಖ್ಯವಾಗಿ ಜೀವನ ಕಳೆಯಲು ನೀರು ಆವಶ್ಯಕವಾಗಿದ್ದು, ಆದರೆ ಇವರಿಗೆ ಕುಡಿಯುವ ನೀರು ಸಿಗದೆ ಪರದಾಡುವ ಸ್ಥಿತಿಯಾಗಿದೆ.
ರಾತ್ರಿ ಸಮಯದಲ್ಲಿ ಅಧ್ಯಕ್ಷೆ ಮನೆಗೆ ಲಕ್ಷ್ಮೀ ಎಂಬವರು ತೆರಳಿ ನಮಗೆ ಕುಡಿಯುವ ನೀರು ಸಿಗದೆ ಕಷ್ಟವಾಗುತ್ತಿದೆಂದು ಕೇಳಲು ಹೋದಾಗ ಅಧ್ಯಕ್ಷೆಯ ಪತಿ ಕೃಷ್ಣ, ತಂದೆ ಧನಂಜಯ, ತಮ್ಮಂದಿರಾದ ಕಿರಣ್, ಹರೀಶ್‌ಎಂಬವರು ಅವ್ಯಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದನ್ನು ಮನಗೊಂಡು ಗ್ರಾಮದ ನಿವಾಸಿಗಳು ಕೇಳಲು ಹೋದಂತಹ ಹೊತ್ತಿನಲ್ಲಿ ಕೆಲ ಯುವಕರ ಮೇಲೆ ಹಲ್ಲೆ ನೆಡೆಸಿರುವುದು ತಿಳಿದು ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿರುತ್ತಾರೆ. ಆದ್ದರಿಂದ ಪಂಚಾಯತ್ ಅಧ್ಯಕ್ಷೆ ಭವ್ಯಾರ ವಿರುದ್ಧ ನೂರಾರು ಸಂಖ್ಯೆಯಲ್ಲಿ ಪಂಚಾಯತ್ ಎದುರು ಧಿಕ್ಕಾರದ ಘೋಷಣೆ ಕೂಗುತ್ತಾ ಬಿಂದಿಗೆಗಳನ್ನು ಹಿಡಿದು ಕುಡಿಯುವ ನೀರು ಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನೆಡೆಸಿದರು.
ವಿಷಯ ತಿಳಿಯುತ್ತಿದಂತೆ ಕುಶಾಲನಗರ ಠಾಣಾಧಿಕಾರಿ ಅನೂಪ್ ಮಾದಪ್ಪನವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಬರುವಂತೆ ಸೂಚಿಸಿ ನಂತರ 15 ದಿನದ ಒಳಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದ್ದರು.ಅಲ್ಲಿವರೆಗೆ ದಿನಕ್ಕೆ ಮೂರು ಬಾರಿ ಟ್ಯಾಂಕರ್ ಮೂಲಕ ನೀರು ನೀಡುವುದಾಗಿ ತಿಳಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಜಗದೀಶ್, ಹರೀಶ್, ಗ್ರಾಮಸ್ಥರಾದ ರವೀಂದ್ರ, ಸವಿತಾ, ಅನಿತಾ, ಭವ್ಯಾ, ಪದ್ಮಾ, ಗೌರಮ್ಮ, ಶಶಿಕಲಾ, ರಾಧಾ, ಈಶ್ವರಿ, ಚಂದ್ರಮ್ಮ , ರವಿ, ರಾಜ್, ಮಂಜು, ಶೇಖರ್, ನಾಗರಾಜ್, ಗಣೇಶ, ಸ್ವಾಮಿ, ಸುರೇಶ, ಕರಿಯಪ್ಪ, ಚೆಲುವರಾಜ್, ಮಹೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News