×
Ad

ಇಂದು ಸ್ವಚ್ಛತಾ ಜಾಗೃತಿ ವೆಬ್‌ಸೈಟ್ ಬಿಡುಗಡೆ

Update: 2016-03-27 22:17 IST

ಮಡಿಕೇರಿ, ಮಾ.27: ನಗರವನ್ನು ಸ್ವಚ್ಛವಾಗಿಡುವ ಜನ ಜಾಗೃತಿ ಅಭಿಯಾನದ ಗ್ರೀನ್ ಸಿಟಿ ಫೋರಂನ ವೆಬ್‌ಸೈಟ್ ಉದ್ಘಾಟನಾ ಸಮಾರಂಭ ಮಾ. 28 ರಂದು ನಡೆಯಲಿದೆ.

ನಗರದ ವ್ಯಾಲಿ ವ್ಯೆ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ವೆಬ್‌ಸೈಟ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ. ಗ್ರೀನ್ ಸಿಟಿ ಫೋರಂನ ಕಾರ್ಯಕ್ರಮಗಳ ವಿವರ ಹಾಗೂ ನಾಗರಿಕರಿಗೆ ಉಪಯುಕ್ತವಾಗುವ ಸಲಹೆಗಳು, ನಗರದ ಬಗ್ಗೆ ಜನರ ಅಭಿಪ್ರಾಯ ಮುಂತಾದ ವಿವರಗಳು ಈ ವೆಬ್‌ಸೈಟ್‌ನಲ್ಲಿ ಇರುತ್ತವೆ.

ಎ.3ರಂದು ನಡೆಯಲಿರುವ ಲೆಟ್ ಅಸ್ ಕ್ಲೀನ್ ಇಟ್ ಅಭಿಯಾನದ ಕುರಿತು ಸುಮಾರು 50 ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಇದೇ ಸಂದರ್ಭ ನಡೆಯಲಿದೆ. ಈಗಾಗಲೇ ಸ್ವಯಂ ಪ್ರೇರಣೆಯಿಂದ ಹಲವು ಸಂಸ್ಥೆಗಳು ಮುಂದೆ ಬಂದು ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿವೆ. ಹೆಚ್ಚಿನ ಮಾಹಿತಿಗಾಗಿ ಪದಾಧಿಕಾರಿ ರಮೇಶ್ ಉತ್ತಪ್ಪ(94830 49005) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News