ಭಾರತದ ಅಸಹಿಷ್ಣುತೆಗೆ ಬಲಿಯಾದ ವಸೀಂ ಅಕ್ರಂ: ಪಾಕಿಸ್ತಾನಿ ಮಾಧ್ಯಮಗಳಿಂದ ಬಣ್ಣನೆ!

Update: 2016-03-28 11:46 GMT

ಲಾಹೋರ್, ಮಾರ್ಚ್.28: ಪಾಕಿಸ್ತಾನದ ಮಾಧ್ಯಮಗಳು ಮಾಜಿ ಕ್ರಿಕೆಟರ್ ವಸೀಂ ಅಕ್ರಂನ್ನು ಅಸಹಿಷ್ಣುತೆಯ ಹೊಸ ಬಲಿಪಶು ಎಂದು ಬಣ್ಣಿಸಿವೆ. ದ ಇಂಟರ್‌ನ್ಯಾಶನಲ್ ನ್ಯೂಸ್ ವಸೀಂ ಅಕ್ರಂ ಬಿಕವ್ಸ್ ಲೇಟೆಸ್ಟ್ ವಿಕ್ಟಿವ್ ಆಪ್ ಇಂಟೊಲರೆನ್ಸ್ ಇನ್ ಇಂಡಿಯಾ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದೆ. ಇದೇ ರೀತಿ ಪಾಕಿಸ್ತಾನಿ ನ್ಯೂಸ್ ಚ್ಯಾನೆಲ್‌ಜಿಯೋ ನ್ಯೂಸ್ ಅಕ್ರವ್ರೊಂದಿಗೆ ನಡೆದ ಘಟನೆಯನ್ನು ಅಸಹಿಷ್ಣುತೆ ಎಂದು ಪ್ರತಿಬಿಂಬಿಸಿದೆ. ಆದರೆ ಈವರೆಗೂ ವಸೀಂ ಅಕ್ರವ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಸೀಂ ಅಕ್ರವ್ ಆಜ್‌ತಕ್ ನ್ಯೂಸ್ ಚ್ಯಾನೆಲ್‌ನಲ್ಲಿ ಲೈವ್ ಚರ್ಚೆ ನಡೆಸುತ್ತಿದ್ದರು. ಆಗ ಕೆಲವು ಮಂದಿಯ ತಂಡ ಬಂದು ಅವರನ್ನು ಕಾರ್ಯಕ್ರಮ ನಡೆಸದಂತೆ ತಡೆಯಿತು. ಪಾಕಿಸ್ತಾನಿ ಟಿವಿ ಚ್ಯಾನೆಲ್ ದುನಿಯಾ ನ್ಯೂಸ್ ಕೂಡಾ ವಸೀಂ ಅಕ್ರವ್ಗೆ ಸಂಬಂಧಿಸಿದ ಸುದ್ದಿ ಪ್ರಸಾರಿಸಿತ್ತು. ಇದರ ಚ್ಯಾನೆಲ್ ವೆಬ್‌ಸೈಟ್‌ನಲ್ಲಿ ವಸೀಂ ಅಕ್ರವ್ ಹ್ಯಾಕ್ಲ್‌ಡ್ ಬೈ ಅನ್ನೋನ್ ಅಸ್ಸಲಿಯಂಟ್ಸ್ ಓನ್ ಇಂಡಿಯಾ ಟಿವಿ ಎಂಬ ಶೀರ್ಷಿಕೆಯಲಿ್ಲ ವರದಿ ಪ್ರಕಟಿಸಿತ್ತು.

ಮೊಹಾಲಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಟೀವ್ ಇಂಡಿಯ ದೊಡ್ಡ ಗೆಲುವು ಸಾಧಿಸಿದ ನಂತರ ಇಡೀ ದೇಶ ಸಂಭ್ರಮಾಚರಿಸುತ್ತಿತ್ತು. ದೇಶದ ಇತರ ಎಲ್ಲ ನ್ಯೂಸ್ ಚ್ಯಾನೆಲ್‌ನಲ್ಲಿದ್ದಂತೆ ಆಜ್ ತಕ್‌ನಲ್ಲಿಯೂ ವಿರಾಟ್ ಕೊಹ್ಲಿಯ ಕುರಿತು ಚರ್ಚೆ ನಡೆಯುತ್ತಿತ್ತು. ಆ್ಯಂಕರ್ ವಿಕ್ರವ್ ಗುಪ್ತ ಹಾಗೂ ಅತಿಥಿಯಾಗಿ ವಸೀಂ ಅಕ್ರವ್ ಬಾಗವಹಿಸಿದ್ದರು. ಆ್ಯಂಕರ್ ಪ್ರಶ್ನೆಗೆ ಅಕ್ರವ್ ವಿರಾಟ್ ಕೊಹ್ಲಿಯ ಕುರಿತು ಪ್ರಶಂಸೆ ಮಾಡುತ್ತಿದ್ದರು. ಅಷ್ಟರಲ್ಲಿ ವ್ಯಕ್ತಿಯೊಬ್ಬ ಅಕ್ರವ್ ಮುಂದೆ ಹಾಜರಾಗಿ ಸಾಕು ನಿಲ್ಲಿಸು ಎಂದು ಹೇಳಿದ್ದಾನೆ. ಅಕ್ರವ್ ತನ್ನ ಕುರ್ಚಿಯಿಂದ ಎದ್ದರು. ಅಷ್ಟರಲ್ಲಿ ಕ್ಯಾಮರಾಆಪ್ ಆಗಿತ್ತು. ನಂತರ ವಸೀಂ ಅಕ್ರವ್ ಸಂಪೂರ್ಣ ಸರಿಯಾಗಿದ್ದಾರೆ ಎಂದು ಹೇಳಿದ್ದರು. ಕೆಲವು ಅಭಿಮಾನಿಗಳು ಮತ್ತು ಸ್ಥಳೀಯರು ಬಂದಿದ್ದರು . ಆದ್ದರಿಂದ ಅವರ ಕಾರಣದಿಂದ ಚರ್ಚೆ ಮುಂದುವರಿಸಲಾಗಿಲ್ಲ ಎಂದು ಹೇಳಿದ್ದರು. ಆದರೆ ಅಭಿಮಾನಿಗಳು ಹಾಗೆ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಈಕುರಿತು ವಸೀಂ ಅಕ್ರವ್ ಆಗಲಿ ಚ್ಯಾನೆಲ್ ಆಗಲಿ ವಿವರವಾಗಿ ಏನು ತಿಳಿಸಿಲ್ಲ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News