ಲಾರಿ ಪಲ್ಟಿ: ಪ್ರಾಣಾಪಾಯದಿಂದ ಪಾರು
Update: 2016-03-28 22:05 IST
ಕುಶಾಲನಗರ, ಮಾ.28: ಇಲ್ಲಿನ ಸಮೀಪದ ಸುಂಟಿಕೊಪ್ಪದಿಂದ ಮಾದಾಪುರಕ್ಕೆ ತೆರಳುವ ರಸ್ತೆಯಲ್ಲಿ ಹಾಲು ಸಾಗಾಟ ಮಾಡುತ್ತಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಮುಂಜಾನೆ ವರದಿಯಾಗಿದೆ.
ಸ್ಥಳೀಯ ಮನೆಯವರು ಅಪಾಯದಲ್ಲಿದ್ದ ಚಾಲಕ ಮತ್ತು ಕ್ಲೀನರನ್ನು ಅಪಾಯದಿಂದ ಪಾರು ಮಾಡಿದರು. ಸಾರ್ವಜನಿಕರು ಮುಗಿ ಬಿದ್ದರೂ ಯಾರೂ ಸಹಾಯ ಮಾಡಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ವಾಹನದಿಂದ ಹೊರ ಚೆಲ್ಲಿದ ಹಾಲಿನ ಪ್ಯಾಕೇಟ್‌ನ್ನು ದೋಚಲಾಗಿದೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.