ಕಾಡಾನೆ ದಾಳಿ: ಮಹಿಳೆ ಬಲಿ
ಮಡಿಕೇರಿ, ಮಾ. 29: ಕಾಡಾನೆ ದಾಳಿಗೆ ವೃದ್ಧೆಯೊಬ್ಬರು ಬಲಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಬೆಂಬಳೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಜಯಮ್ಮ (80) ಮೃತ ದುರ್ದೈವಿ. ಮಾ. 29ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯ ಆವರಣದಲ್ಲಿ ವಾಯು ವಿಹಾರದಲ್ಲಿ ತೊಡಗಿದ್ದ ಜಯಮ್ಮ ಅವರ ಮೇಲೆ ಪಕ್ಕದ ಕಾಫಿ ತೋಟದಲ್ಲಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಒಂಟಿ ಸಲಗದ ತುಳಿತಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೋಟದ ಮೂಲಕವೇ ಮತ್ತೊಂದು ರಸ್ತೆಗೆ ಬಂದ ಆನೆ, ಬೈಕ್ ಸವಾರನೊ ಬ್ಬನನ್ನು ಅಟ್ಟಿಸಿಕೊಂಡು ಹೋಗಿದೆ. ಈ ಸಂದರ್ಭ ಗಾಬರಿಗೊಂಡ ಚಾಲಕ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದು, ಒಂಟಿ ಸಲಗದ ದಾಳಿಯಿಂದ ತಪ್ಪಿಸಿ ಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕೊಡಗು ಡಿಸಿಎಫ್ ಏಡುಕೊಂಡಾಲು, ಶನಿವಾ ರಸಂತೆ ಆರ್‌ಎಫ್‌ಒ ಅಚ್ಚಪ್ಪ ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ದಾಳಿಗೆ ಬಲಿಯಾದ ವೃದ್ಧೆ ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿ, 1 ಲಕ್ಷ ರೂ. ಚೆಕ್‌ನ್ನು ಅಧಿಕಾರಿಗಳು ಸ್ಥಳದಲ್ಲೇ ವಿತರಿಸಿದರು.
<ಗ್ರಾಮಸ್ಥರ ಅಸಮಾಧಾನ: ಘಟನೆಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ರಾತ್ರಿ ವೇಳೆಯಲ್ಲಿ ಈ ಕಾಡಾನೆಗಳು ಗ್ರಾಮದ ರೈತರಿಗೆ ಸೇರಿದ ಗದ್ದೆ, ಬಾಳೆತೋಟ, ಕಾಫಿತೋಟಗಳಿಗೆ ನುಸುಳಿ ಫಸಲು ನಷ್ಟ ಪಡಿಸುತ್ತಿವೆ. ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಇಲ್ಲಿಯವರೆಗೆ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.