×
Ad

ಗ್ರಾಪಂ ಉಪ-ಚುನಾವಣೆ: ಅಧಿಸೂಚನೆ

Update: 2016-03-30 21:59 IST

 ಚಿಕ್ಕಮಗಳೂರು, ಮಾ.30: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ಎ. 17ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ ಎ. 4ರಂದು ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ, ಈಶ್ವರಹಳ್ಳಿ, ಬೆಳವಾಡಿ, ಮಾಚೇನಹಳ್ಳಿ, ಕುರುಬರಬೂದಿಹಾಳ್, ಸಿಂಧಿಗೆರೆ, ಆವತಿ ಗ್ರಾಮಗಳಿಗೆ, ಕಡೂರು ತಾಲೂಕಿನ ಹಿರೇನಲ್ಲೂರು, ಹುಳಿಗೆರೆ, ದೇವನೂರು, ಚಿಕ್ಕದೇವನೂರು, ನಿಡಗಟ್ಟ, ಎಸ್.ಬಿದರೆ, ನಾಗರಾಳು ಗ್ರಾಪಂ ಗಳಿಗೆ, ತರೀಕೆರೆ ತಾಲೂಕಿನ ಅಜ್ಜಂಪುರ, ಕೆಂಚಿಕೊಪ್ಪ, ಸಿದ್ದರಹಳ್ಳಿ, ಬಾವಿಕೆರೆ, ಮೂಡಿಗೆರೆ ತಾಲೂಕಿನ ಕುಂದೂರು, ಕಳಸ(ಮಾವಿನಕೆರೆ), ಗೋಣಿಬೀಡು ಗ್ರಾಮ ಪಂಚಾಯತ್‌ಗಳಲ್ಲಿ, ಕೊಪ್ಪ ತಾಲೂಕಿನ ಹೇರೂರು, ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಎ. 7 ಕೊನೆಯ ದಿನವಾಗಿದ್ದು, ಎ. 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮತ ಎಣಿಕೆಯು ಎ. 20ರಂದು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News