ಎಸೆಸೆಲ್ಸಿ ಪರೀಕ್ಷೆ
ಮಡಿಕೇರಿ, ಮಾ. 30: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಪ್ರಮುಖ ಘಟ್ಟವಾದ ಎಸೆಸೆಲ್ಸಿ ಪರೀಕ್ಷೆ ಕೊಡಗು ಜಿಲ್ಲಾ ವ್ಯಾಪ್ತಿಯ 30 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಆರಂಭಗೊಂಡಿದ್ದು, ಎ.13ರವರೆಗೆ ನಡೆಯಲಿದೆ. ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ 8,267 ವಿದ್ಯಾರ್ಥಿಗಳು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢ ಶಾಲೆ, ಸಂತ ಜೋಸೆಫರ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರ ಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಪರೀಕ್ಷೆ ನಡೆಯಿತು.
ಮಡಿಕೇರಿ ತಾಲೂಕಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢ ಶಾಲೆ, ಸಂತ ಜೋಸೆಫರ ಪ್ರೌಢ ಶಾಲೆ, ನಾಪೋಕ್ಲುವಿನ ಸ.ಪ.ಪೂ.ಕಾಲೇಜು, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು, ಮೂರ್ನಾಡು ಪ್ರೌಢ ಶಾಲೆ, ಸಿದ್ದಾಪುರ ಪ್ರೌಢ ಶಾಲೆ, ಸಂಪಾಜೆ ಪ್ರೌಢ ಶಾಲೆ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಮಡಿಕೇರಿ ಜಿ.ಎಂ.ಪಿ. ಶಾಲೆ.
ಸೋಮವಾರಪೇಟೆ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ಹಾನಗಲ್ಲು ಒ.ಎಲ್.ವಿ.ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಶಾಲನಗರ ಫಾತಿಮಾ ಪ್ರೌಢ ಶಾಲೆ, ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜು, ಸುಂಟಿಕೊಪ್ಪ ಸಂತ ಮೇರಿಸ್ ಆಂಗ್ಲ ಪ್ರೌಢಶಾಲೆ, ಹೆಬ್ಬಾಲೆ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ನೆಲ್ಲಿಹುದಿಕೇರಿ ಸರಕಾರಿ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆೆ. ವೀರಾಜಪೇಟೆ ತಾಲೂಕಿನ ಸರಕಾರಿ ಪ.ಪೂ.ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ, ವೀರಾಜಪೇಟೆ ಜೆ.ಪಿ.ಎನ್. ಬಾಲಕಿಯರ ಪ್ರೌಢ ಶಾಲೆ, ಗೋಣಿಕೊಪ್ಪ ಸರಕಾರಿ ಪ್ರೌ.ಢ ಶಾಲೆ, ಗೋಣಿಕೊಪ್ಪ ಪ್ರೌಢ ಶಾಲೆ, ಪೊನ್ನಂಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜು, ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು, ಶ್ರೀಮಂಗಲ ಪ.ಪೂ.ಕಾಲೇಜು, ಪಾಲಿಬೆಟ್ಟ ಸರಕಾರಿ ಪ್ರೌಢ ಶಾಲೆ, ತಿತಿಮತಿ ಸರಕಾರಿ ಪ್ರೌಢ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆಯಿತು.