23 ಮೀನುಗಾರರ ರಕ್ಷಣೆ
Update: 2016-03-30 22:04 IST
ಹೊನ್ನಾವರ, ಮಾ. 30: ಹೂಳಿನಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟಿನಲ್ಲಿ ಸಿಲುಕಿದ್ದ 23 ಮೀನುಗಾರರನ್ನು ಕರಾವಳಿ ಕಾವಲು ಪಡೆಯವರು ಬುಧವಾರ ರಕ್ಷಣೆ ಮಾಡಿದ್ದಾರೆ. ಹೊನ್ನಾವರ ತಾಲೂಕಿನಲ್ಲಿ ಈ ಘಟನೆ ಸಂಭವಿಸಿದ್ದು, ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಲಾಗಿದೆ. ಶ್ರೀರಂಗ ಹೆಸರಿನ ಪರ್ಸಿಯನ್ ಬೋಟ್ ಹೂಳಿನ ಸಮಸ್ಯೆಯಿಂದಾಗಿ ಉತ್ತರ ಕನ್ನಡ ಹೊನ್ನಾವರದ ಶರಾವತಿ ಹಾಗೂ ಸಮುದ್ರದಲ್ಲಿ ಈ ಮೀನುಗಾರಿಕಾ ಬೋಟ್ ಮುಳಗಡೆಯಾಗಿದೆ. ಈ ಬೋಟ್ ರಾಜು ಜಾವಗಲ್ ಎಂಬವರಿಗೆ ಸೇರಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ ಎನ್ನಲಾಗಿದೆ. ಮೀನುಗಾರಿಕೆ ನಡೆಸಿ ವಾಪಸ್ ಬರುವ ವೇಳೆಯಲ್ಲಿ ದುರಂತ ಸಂಭಿವಿಸಿದೆ.