ವಿದ್ಯುತ್ ದರ ಹೆಚ್ಚಳ ವಿವರ
ಬೆಂಗಳೂರು, ಮಾ. 30: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳವಾಗಲಿದ್ದು, ಎ.1ರಿಂದ ಜಾರಿಯಾಗಲಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ ಸರಾಸರಿ 48 ಪೈಸೆಯಷ್ಟು ಹೆಚ್ಚಳವಾಗಲಿದ್ದು, ಯಾವುದಕ್ಕೆ ಎಷ್ಟು ಹೆಚ್ಚಳವಾಗಲಿದೆ ಎಂಬುದರ ವಿವರ ಈ ಕೆಳಗಿನಂತಿದೆ:
ನಗರ ಪ್ರದೇಶದ ಗೃಹಬಳಕೆ ಗ್ರಾಹಕರಿಗೆ
-30 ಯೂನಿಟ್‌ವರೆಗೆ ರೂ. 2.70 ಪೈಸೆಯಿಂದ 3 ರೂ.ಗೆ ಏರಿಕೆ
-31ರಿಂದ 100 ಯೂನಿಟ್‌ವರೆಗೆ 4 ರೂ. ನಿಂದ 4.40 ಪೈಸೆಗೆ ಹೆಚ್ಚಳ
-101ರಿಂದ 200 ಯೂನಿಟ್‌ವರೆಗೆ ರೂ. 5.40 ಪೈಸೆಯಿಂದ 5.90 ಪೈಸೆಗೆ ಹೆಚ್ಚಳ
-200 ಯೂನಿಟ್ ಮೇಲ್ಪಟ್ಟು 6.40 ಪೈಸೆಯಿಂದ 6.90 ಪೈಸೆಗೆ ಏರಿಕೆ
ಗ್ರಾಮೀಣ ಪ್ರದೇಶ ಗಹಬಳಕೆ ಗ್ರಾಹಕರಿಗೆ
-ಮೊದಲ 30 ಯೂನಿಟ್‌ಗೆ 2.60 ಪೈಸೆಯಿಂದ 2.90 ಪೈಸೆಗೆ ಹೆಚ್ಚಳ
-31 ರಿಂದ 100 ಯೂನಿಟ್‌ವರೆಗೆ ರೂ. 3.70 ಪೈಸೆಯಿಂದ 4.10 ಪೈಸೆಗೆ ಹೆಚ್ಚಳ
-101ರಿಂದ 200 ಯೂನಿಟ್‌ವರೆಗೆ ರೂ. 5.10 ಪೈಸೆಯಿಂದ 5.60 ಪೈಸೆಗೆ ಹೆಚ್ಚಳ
-200 ಯೂನಿಟ್ ಮೇಲ್ಪಟ್ಟು 5.90 ಪೈಸೆಯಿಂದ 6.40 ಪೈಸೆಗೆ ಹೆಚ್ಚಳ
ಕೈಗಾರಿಕೆ
-ಬೆಸ್ಕಾಂ ವ್ಯಾಪ್ತಿಯ ಎಲ್ಟಿ ಕೈಗಾರಿಕೆಗೆ ಸರಾಸರಿ 15ರಿಂದ 30 ಪೈಸೆ ಹೆಚ್ಚಳ
-ಮೊದಲ 500 ಯೂನಿಟ್‌ವರೆಗೆ ರೂ. 4.90 ಪೈಸೆ ಇತ್ತು, 5.10 ರೂ.ಗೆ ಹೆಚ್ಚಳ
-500 ಯೂನಿಟ್‌ಗಿಂತ ಅಧಿಕ ಬಳಕೆಗೆ 6 ರೂ.ಯಿಂದ 6.30 ಪೈಸೆ
ಬೆಸ್ಕಾಂ ಹೊರತುಪಡಿಸಿ ಉಳಿದ ಎಸ್ಕಾಂಗಳಿಗೆ
-ಮೊದಲ 500 ಯೂನಿಟ್‌ವರೆಗೆ ರೂ. 4.75 ಪೈಸೆ ಇತ್ತು, 4 ರೂ. 95 ಪೈಸೆ
-501ರಿಂದ 1000ಯೂನಿಟ್‌ವರೆಗೆ ರೂ. 5.55 ಪೈಸೆ ಇತ್ತು, 5.85 ಪೈಸೆಗೆ ಹೆಚ್ಚಳ
-1000 ಯೂನಿಟ್ ಮೇಲ್ಪಟ್ಟು ರೂ. 5.85 ಪೈಸೆ ಇತ್ತು, 6.15 ಪೈಸೆಗೆ ಹೆಚ್ಚಳ
ವಾಣಿಜ್ಯ ಬಳಕೆ
-ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳ
-ಮೊದಲ 50 ಯೂನಿಟ್‌ಗೆ ರೂ. 6.95 ಪೈಸೆಯಿಂದ 7.15 ಪೈಸೆಗೆ ಹೆಚ್ಚಳ
-50 ಯೂನಿಟ್ ನಂತರದ ಬಳಕೆಗೆ ರೂ. 7.95 ಪೈಸೆ ಇತ್ತು, 8.15 ಪೈಸೆಗೆ ಹೆಚ್ಚಳ
ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆಗೆ
-ಮೊದಲ 50 ಯೂನಿಟ್‌ಗೆ ರೂ. 6.45 ಪೈಸೆಯಿಂದ 6.65 ಪೈಸೆಗೆ ಹೆಚ್ಚಳ
-50 ಯೂನಿಟ್ ನಂತರದ ಬಳಕೆಗೆ ರೂ. 7.45 ಪೈಸೆ ಇತ್ತು, 7.65 ಪೈಸೆಗೆ ಹೆಚ್ಚಳ
ಕುಡಿಯುವ ನೀರು ಸರಬರಾಜು, ಬೀದಿ ದೀಪ ಬಳಕೆಯ ವಿದ್ಯುತ್‌ಗೂ ದರ ಏರಿಕೆ ಬಿಸಿ
-ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಳ
-ಎಲ್ಇಡಿ ಬಳಕೆಗೆ ದರ ಏರಿಕೆ ಇಲ್ಲ
-ಇತರ ಬೀದಿ ದೀಪಗಳಿಗೆ 50 ಪೈಸೆ.