ಅತ್ಯಾಚಾರ ಪ್ರಕರಣ: ರಾಘವೇಶ್ವರಶ್ರೀ ಆರೋಪ ಮುಕ್ತ
Update: 2016-03-31 23:55 IST
ಬೆಂಗಳೂರು, ಮಾ.31: ರಾಮಕಥಾ ಗಾಯಕಿ ಪ್ರೇಮಲತಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಮಚಂದ್ರಾಪುರ ಮಠದ ರಾಘ ವೇಶ್ವರ ಶ್ರೀಗಳನ್ನು ಸೆಷನ್ಸ್ ನ್ಯಾಯಾ ಲಯ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ರಾಮಕಥಾ ಗಾಯಕಿ ಪ್ರೇಮಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಆರೋಪಿ ರಾಘವೇಶ್ವರಶ್ರೀ ವಿರುದ್ಧ ಯಾವುದೇ ಸೂಕ್ತ ಸಾಕ್ಷಾಧಾರ ಲಭ್ಯ ವಾಗದ ಹಿನ್ನೆಲೆಯಲ್ಲಿ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಪ್ರೇಮಲತಾ ಆರೋಪ ಹಾಗೂ ದೂರವಾಣಿ ಕರೆ ಪಟ್ಟಿಗೂ ಸಾಮ್ಯತೆಯಿಲ್ಲ. ಬಟ್ಟೆಯಲ್ಲಿ ಗುರುತು ಮಾಡಿದ್ದ ಕಡೆ ಡಿಎನ್‌ಎ ಹೊಂದಾ ಣಿಕೆಯಾಗಿಲ್ಲ.
ಅತ್ಯಾಚಾರ ನಡೆದಿದ್ದಕ್ಕೆ ಯಾವುದೇ ಸಾಕ್ಷಾಧಾರಗಳೂ ದೊರೆತ್ತಿಲ್ಲ. ದೂರವಾಣಿ ಕರೆಗಳೂ ಹೋಲಿಕೆಯಾಗುತ್ತಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಪ್ರಕರಣದಿಂದ ಬಿಡುಗಡೆ ಕೋರಿ ರಾಘವೇಶ್ವರ ಶ್ರೀಗಳೂ ಅರ್ಜಿ ಸಲ್ಲಿಸಿದ್ದರು.