ಮತ್ತೆನಾದ್ರೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ್ರೆ ರಾಜೀನಾಮೆ ಕೊಡುತ್ತೇನೆ: ಸಚಿವ ಕಿಮ್ಮನೆ
ಬೆಂಗಳೂರು, ಎ.1: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ, ಜೆಡಿಎಸ್, ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ತಲೆದಂಡಕ್ಕೆ ಒತ್ತಾಯಿಸುತ್ತಿರುವಾಗ ಮತ್ತೊಮ್ಮೆ ಹೇಳಿಕೆ ನೀಡಿರುವ ಸಚಿವ ಕಿಮ್ಮನೆ ಈ ಕಾರಣಕ್ಕಾಗಿ ತಾನು ರಾಜೀನಾಮೆ ನೀಡುವುದಿಲ್ಲ. ಮತ್ತೆನಾದ್ರೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ” ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿಮ್ಮನೆ " ಉಪನ್ಯಾಸಕರ ವೇತನ ತಾರತಮ್ಯ ವಿವಾದ, ಕುಮಾರ್ ನಾಯಕ್ ವರದಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಯಾವುದೇ ಭರವಸೆ ನೀಡಿಲ್ಲ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮೌಲ್ಯಮಾಪನಕ್ಕೆ ಸೂಚನೆ ನೀಡಿದದ್ದಾರೆ. ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದರೆ ಪರ‍್ಯಾಯ ವ್ಯವಸ್ಥೆಗೆ ಸರಕಾರ ಸಿದ್ದ ''ಎಂದು ಹೇಳಿದರು.
"ವಿದ್ಯಾರ್ಥಿಗಳಿಗೆ ಪಿಯು ಮಂಡಳಿಯಿಂದ ಅನ್ಯಾಯವಾಗಿದೆ. ಆದರೆ ಮರುಪರೀಕ್ಷೆ ಅನಿವಾರ್ಯವಾಗಿದೆ" ಎಂದು ಕಿಮ್ಮನೆ ಅಭಿಪ್ರಾಯಪಟ್ಟರು.