ಪಿಯು ಮಂಡಳಿಯ ನಿರ್ದೇಶಕಿ ಆಕುರಾತಿ ವರ್ಗಾವಣೆ; ಸಾರಿಗೆ ಆಯುಕ್ತ ರಾಮೇಗೌಡಗೆ ಹೆಚ್ಚುವರಿ ಹೊಣೆ
Update: 2016-04-01 21:51 IST
ಬೆಂಗಳೂರು, ಎ.1: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪಿಯು ಮಂಡಳಿಯ ನಿರ್ದೇಶಕಿ ಪಲ್ಲವಿ ಆಕುರಾತಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಾರಿಗೆ ಇಲಾಖೆಯ ಆಯುಕ್ತ ರಾಮೇಗೌಡ ಅವರಿಗೆ ಪಿಯು ಮಂಡಳಿಯ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಆಕುರಾತಿ ಅವರನ್ನು ಡಿಪಿಎಆರ‍್ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ.