ಅಕ್ರಮ ಮದ್ಯ: ಆರೋಪಿ ಬಂಧನ
Update: 2016-04-01 22:08 IST
ಚಿಕ್ಕಮಗಳೂರು, ಎ.1: ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಆರೋಪದಡಿ ಆರೋಪಿಯೋರ್ವನನ್ನು ಲಕ್ಕವಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ರಂಗೇನಹಳ್ಳಿ ಗ್ರಾಮದ ಶೇಟು(41) ಬಂಧಿತ ಆರೋಪಿ. ಈತ ರಂಗೇನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ 750 ರೂ. ವೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.