ಅಕ್ರಮ ಮರಳು: ಪ್ರಕರಣ ದಾಖಲು
Update: 2016-04-01 22:09 IST
ಚಿಕ್ಕಮಗಳೂರು, ಎ.1: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಆರೋಪದಡಿ ನೋಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ಯಗಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಜಯಕುಮಾರ್(31) ಮತ್ತು ಮಂಜಪ್ಪ(26) ಬಂಧಿತ ಆರೋಪಿ. ಆರೋಪಿಗಳು ಚೌಳಹಿರಿಯೂರು ಗ್ರಾಮದ ಹತ್ತಿರ ಜಮ್ಮಾಪುರ ಗೇಟ್ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.