×
Ad

ದೊಡ್ಡಬಳ್ಳಾಪುರ; ಶೌಚಾಲಯದ ಗುಂಡಿ ಸ್ವಚ್ಚಗೊಳಿಸಲು ಇಳಿದ ನಾಲ್ವರು ಸಾವು

Update: 2016-04-03 16:32 IST

ಬೆಂಗಳೂರು , ಎ.3:ಶೌಚಾಲಯದ ಗುಂಡಿ ಸ್ವಚ್ಚಗೊಳಿಸಲು ಇಳಿದ ನಾಲ್ವರು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರದಲ್ಲಿ ಇಂದು ಸಂಭವಿಸಿದೆ.
 ಹೈದರಾಬಾದ್‌ನ ರಾವುಸ್‌ ಕನ್‌ಸ್ಟ್ರಕ್ಷನ್‌ ಕಂಪೆನಿಯ ಇಬ್ಬರು ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳಾದ ಮಧು (26)ಹಾಗೂ ಮುನಿರಾಜು (26)ಮೃತಪಟ್ಟವರು.
ರಾವುಸ್‌ ಕನ್‌ಸ್ಟ್ರಕ್ಷನ್‌ ಕಂಪೆನಿಯ ಕಾರ್ಮಿಕರು ಶೌಚಾಲಯದ ಗುಂಡಿಯನ್ನು ಸ್ವಚ್ಚಗೊಳಿಸಲು ಇಳಿದಾಗ ಅವರು ಗುಂಡಿಯಲ್ಲಿ  ಉಸಿರುಗಟ್ಟಿ ಸಿಕ್ಕಿ ಹಾಕಿಕೊಂಡರು . ಅವರನ್ನು ರಕ್ಕಿಸಲು ಗುಂಡಿಗೆ ಇಳಿದ ಮಧು ಹಾಗೂ ಮುನಿರಾಜು ಮೇಲೆ ಬರಲಾರದೆ ಉಸಿರುಗಟ್ಟಿ ಮೃತಪಟ್ಟರು
ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ಮೃತದೇಹಗಳನ್ನು ಶೌಚಾಲಯದ ಗುಂಡಿಯಿಂದ ಮೇಲೆಕ್ಕೆತ್ತಲು ಹರ ಸಾಹಸ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News