ಮುಖ್ಯಮಂತ್ರಿ ವಿರುದ್ದವೇ ಎಸಿಬಿಗೆ ಪ್ರಥಮ ದೂರು
Update: 2016-04-03 16:44 IST
ಬೆಂಗಳೂರು,ಎ.3: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಮಾಡಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ರ ವಿರುದ್ದವೇ ಲಕ್ಷಾಂತರ ರೂ. ಬೆಲೆ ಬಾಳುವ ವಾಚ್ ಹಗರಣ ಕುರಿತು, ಎಸಿಬಿಗೆ ಪ್ರಥಮ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಎಸಿಬಿ ರಚನೆ ಮಾಡಲಾಗಿದೆ.
ಮುಖ್ಯಮಂತ್ರಿ ವಿರುದ್ಧದ ಕೇಸಿನಲ್ಲಿ ಎಸಿಬಿ ಸತ್ಯ ಹೊರತರಲಿ, ಸತ್ಯ ಹೊರಬಂದರೆ ಆಗ ಮಾತ್ರ ಜನರಿಗೆ ಎಸಿಬಿ ಬಗ್ಗೆ ನಂಬಿಕೆ ಬರಲು ಸಾಧ್ಯ. ಮುಖ್ಯಮಂತ್ರಿ ವಿರುದ್ಧವೇ ಪ್ರಥಮ ದೂರು ದಾಖಲಾಗಿದೆ. ಇದಕ್ಕೆ ಸಿಎಂ ಏನು ಪ್ರತಿಕ್ರಿಯಿಸುತ್ತಾರೆ ಎಂದು ನೋಡೋಣ. ಕೇಸಿನ ವಿರುದ್ಧ ಸತ್ಯ ಹೊರಬಂದರೆ, ಎಸಿಬಿಯನ್ನು ನಂಬಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಅವರು ತಿಪಟೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರೆಂದು ತಿಳಿದು ಬಂದಿದೆ.