ಬೈಕ್‌ಗಳ ಮುಖಾಮುಖಿ ಢಿಕ್ಕಿ: ಸವಾರ ಮೃತ್ಯು
Update: 2016-04-03 21:58 IST
ಹೊನ್ನಾವರ, ಎ.3: ತಾಲೂಕಿನ ಹಳದೀಪುರದ ಕೇಶವ ದೇವಸ್ಥಾನದ ಬಳಿಯ ತಿರುವಿನಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ನಿವೃತ್ತ ಶಿಕ್ಷಕ ಶ್ರೀಪಾದ ಮಂಜುನಾಥ ಭಟ್ (74)ಮೃತ ವ್ಯಕ್ತಿ. ಇನ್ನೋರ್ವ ಸವಾರನಿಗೆ ಗಾಯಗಳಾಗಿವೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.