×
Ad

ಯುವ ಕವಿಗಳು ಸಾಹಿತ್ಯದತ್ತ ವಾಲುತ್ತಿರುವುದು ಶ್ಲಾಘನೀಯ: ಡಾ.ಸಿದ್ದಲಿಂಗಯ್ಯ

Update: 2016-04-03 22:07 IST

ಬೆಂಗಳೂರು, ಎ.3: ಹೊಸ ತಲೆಮಾರಿನ ಯುವ ಕವಿಗಳಿಂದು ಕನ್ನಡ ಸಾಹಿತ್ಯವನ್ನು ರಚಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನ ವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಿತ್ಯೋತ್ಸವ ಸಾಹಿತ್ಯ ಬಳಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ, ಕವಿ ರಮೇಶ್ ಹಿರೇಜಂಬೂರ ಅವರು ರಚಿಸಿರುವ ‘ಅಳುವ ನದಿಗಳು’ ಕವನ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ದಲಿತರು ಮತ್ತು ಶೋಷಿತರ ನೋವು-ನಲಿವುಗಳ ಕುರಿತ ಸಾಹಿತ್ಯವನ್ನು ರಚಿಸು ವತ್ತ ಯುವ ತಲೆಮಾರಿನ ಕವಿಗಳು ಮುಂದಾ ಗುತ್ತಿರುವುದು ಅಭಿನಂದನೀಯ. ಸಾಹಿತ್ಯದಲ್ಲಿ ಬಂಡಾಯ ಧೋರಣೆಯ ಕವಿತೆಗಳು ರಚನೆ ಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
 ಸಮಾಜ ಬದಲಾಗಬೇಕು, ಸಮಾನತೆಯ ಸಮಾಜ ನಿರ್ಮಾಣ ಆಗಬೇಕೆಂಬ ಕನಸಿನೊಂದಿಗೆ ಯುವ ಕವಿಗಳು ತಮ್ಮ ಸಾಹಿತ್ಯವನ್ನು ರಚಿಸಬೇಕು. ಆ ಹಿನ್ನೆಲೆಯಲ್ಲಿ ಆರೋಗ್ಯಪೂರ್ಣವಾದ ಕವಿತೆಗಳು ಅಳುವ ನದಿಗಳು ಕವನ ಸಂಕಲನದಲ್ಲಿ ಮೂಡಿ ಬಂದಿವೆ. ಇನ್ನೂ ಬಡವರು ಬಡವರಾಗಿಯೇ ಉಳಿದಿದ್ದಾರೆ, ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತ್ತಿದ್ದಾರೆ. ಹೀಗಾಗಿ ತುಳಿತಕ್ಕೆ ಒಳಗಾಗಿರುವಂತಹವರು ಇದರಲ್ಲಿರುವ ಅರ್ಥವನ್ನು ಅರಿಯಬೇಕು ಎಂದರು.
ಸಮಾಜದಲ್ಲಿ ಸ್ವತಃ ಅರಿತ ನೋವು- ನಲಿವುಗಳನ್ನು ಪದಗಳನ್ನಾಗಿಸಿ ರಮೇಶ್ ಕವನ ಸಂಕಲನ ಮೂಲಕ ಜನರಿಗೆ ತಲುಪಿಸು ವಂತಹ ಪ್ರಯತ್ನ ಮಾಡಿದ್ದಾರೆ. ಇಂತಹ ಕವನ ಸಂಕಲನಗಳು ಮತ್ತು ಕನ್ನಡ ಸಾಹಿತ್ಯ ಹೆಚ್ಚಾಗಿ ಹೊರಬರಬೇಕು. ಹಾಗೂ ಹೆಚ್ಚು ಜನರನ್ನು ತಲುಪಬೇಕು. ಆಗ ಮಾತ್ರ ಸಮಾಜದಲ್ಲಿ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಇದು ಮುಂದಿನ ಯುವ ಕವಿಗಳ ಆಶಯವಾಗಿರಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ್, ನಮ್ಮ ನಾಡಿನ ಸಾಹಿತ್ಯಕ್ಕೆ ಹಲವು ಹಳೆಯ ಇತಿಹಾಸವಿದೆ. ಆದರೆ ಇಂದು ಸುಮಾರು 2 ಸಾವಿರ ವರ್ಷಗಳ ಹಳೆಯ ದಾಖಲೆಗಳು ಸಿಗುವುದಿಲ್ಲ. ಅದರಲ್ಲಿ ನಮ್ಮ ನಾಡಿನ ಜನರು ಎಡವುತ್ತಿದ್ದಾರೆ ಎಂದು ಹೇಳಿದರು.
ಜಾಗತೀಕರಣದಲ್ಲಿ ನಮ್ಮ ದೇಶಿಯ ಭಾಷೆ, ಕಲೆ, ಸಂಸ್ಕೃತಿ ನಾಶವಾಗುತ್ತಿದೆ. ಭೂಮಿಯನ್ನು, ಕೃಷಿಯನ್ನು ಮತ್ತು ರೈತರನ್ನು ಮರೆಯಲಾಗುತ್ತಿದೆ. ರೈತ ಬೆಳೆದ ಅಕ್ಕಿ ನಮಗೆ ಬೇಕಿದೆ,ಆದರೆ ಅದೇ ರೈತ ಕೈ ಕೆಸರು ಮಾಡಿಕೊಂಡು ಮುಂದೆ ನಿಂತರೆ ಅವನನ್ನು ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 ಕವಿತೆಗಳು ಸಾಮಾನ್ಯ ಜನರಿಗೂ ತಲುಪಬೇಕು. ಅಲ್ಲಿ ಜನರಿಗೆ ಕವಿತೆಗಳು ನೋವಾಗು ವಂತೆ ತಡೆದು, ಇಲ್ಲಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಎಚ್ಚರಗೊಳಿಸಿ ಜಾಗೃತ ಗೊಳಿಸುವಂತಾಗಬೇಕು ಎಂದು ಹೇಳಿದರು. ರಂಗಕರ್ಮಿ ಕೆ.ವಿ. ನಾಗರಾಜ ಮೂರ್ತಿ, ಪುಸ್ತಕ ಪ್ರಾಧಿಕಾರ ಕಾರ್ಯದರ್ಶಿ ಡಾ.ಕೆ.ಮುರಳೀಧರ್, ಕೃತಿಯ ಲೇಖಕ ರಮೇಶ್ ಹಿರೇಜಂಬೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News