×
Ad

ವೇತನ ತಾರತಮ್ಯ ನಿವಾರಣೆಗೆ ಒತ್ತಾಯ

Update: 2016-04-03 22:11 IST

ದಾವಣಗೆರೆ,ಎ.3: ಪ್ರಾಂಶುಪಾಲರು ಹಾಗೂ ಉಪನ್ಯಾಸ ಕರ ವೇತನ ತಾರತಮ್ಯ ನಿವಾರಣೆಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಚಿನ್ನಮ್ಮ ಮಹೇಶ್ವರಯ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

  ಎ. 11ರಂದು ನೇಮಿಸಲಾದ ಸರಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಅಧ್ಯಕ್ಷತೆಯ ಸಮಿತಿ ಉಪನ್ಯಾಸಕರ ಬೇಡಿಕೆಯಲ್ಲಿರುವ ನೈಜತೆಯನ್ನು ಪರಿಗಣಿಸಿ ಉಪನ್ಯಾಸಕರ ವೇತನ ಶ್ರೇಣಿ ಉತ್ತಮಪಡಿಸುವ ಆವಶ್ಯಕತೆ ಎಂದು ವರದಿ ಸಲ್ಲಿಸಿತ್ತು. ಆದರೆ, ಸುಮಾರು 5 ವರ್ಷಗಳಿಂದ ಹಲವಾರು ಬೇಡಿಕೆಗಳ ಈಡೇರಿಕೆಗೆ ಅನೇಕ ಹೋರಾಟ ನಡೆಸಿದ್ದರೂ ಸಹ ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಸರಕಾರ ಪ್ರಾರಂಭಿಕ ಉಪನ್ಯಾಸಕರಿಗೆ 12,650 ರಿಂದ 23,250 ವೇತನ ಶ್ರೇಣಿ ಹಾಗೂ ಇದಕ್ಕೆ ಸಂವಾದಿಯಾಗಿ ಹಿರಿಯ ಉಪನ್ಯಾಸಕರಿಗೆ ಸ್ವಯಂ ಚಾಲಿತ ಭಡ್ತಿ, ಶ್ರೇಣಿಯ ಉಪನ್ಯಾಸಕರಿಗೆ ಸರಿಹೊಂದುವ ವೇತನ ಶ್ರೇಣಿ ನೀಡುವುದು ಸೂಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೂಡಲೇ ಇದನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕು. ಖಾಸಗಿ ಅನುದಾನಿತ ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಗೆ ಬಸವರಾಜ್ ಹೊರಟ್ಟಿ ನೇತೃತ್ವದ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್. ಮಂಜುನಾಥ ರೆಡ್ಡಿ, ಉಪಾಧ್ಯಕ್ಷ ಬಿ. ಪಾಲಾಕ್ಷಿ, ತಿಪ್ಪೇಸ್ವಾಮಿ, ಬಸವರಾಜಪ್ಪ, ದೊಣ್ಣೆನಾಯ್ಕೆ, ಚಂದ್ರನಾಯ್ಕೆ, ವೀರಪ್ಪ ಚಳಗೇರಿ, ರವೀಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News