×
Ad

ಕುಶಾಲನಗರ: ಪಾಳು ಬಿದ್ದಿರುವ ಬಡಾವಣೆಗಳ ಉದ್ಯಾನವನ

Update: 2016-04-05 22:10 IST

ಕುಶಾಲನಗರ, ಎ. 5: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ 13 ಬಡಾವಣೆಗಳಿದ್ದು, ಸರಕಾರದ ಅನುದಾನದಿಂದ ಲಕ್ಷಾಂತರ ರೂ. ಹಣ ಬಿಡುಗಡೆಯಾಗಿದ್ದು ಪಟ್ಟಣ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಉದ್ಯಾನವನಗಳ ಅಭಿವೃದ್ಧಿ ಮಾಡುವ ಸಲುವಾಗಿ 2ವರ್ಷದ ಹಿಂದೆ ಕಾಮಗಾರಿಗಳು ಆರಂಭವಾದವು.

ಜನಪ್ರತಿನಿಧಿಗಳು ಮತಯಾಚನೆ ಮಾಡುವಂತಹ ಸಂದರ್ಭದಲ್ಲಿ ಜನರಿಗೆ ಆಶ್ವಾಸನೆ ನೀಡಿ ನಿಮ್ಮ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳಾದ ಚರಂಡಿ, ಬೀದಿದೀಪ, ಕುಡಿಯುವ ನೀರು, ರಸ್ತೆ ಮತ್ತು ಉದ್ಯಾನವನ ಮಾಡಿಕೊಡುವುದಾಗಿ ನಾಗರಿಕರ ಮನಸೋಲುವ ಮಾತುಗಳ ಮೂಲಕ ವಿಶ್ವಾಸಗಳಿಸುತ್ತಾರೆ. ಗೆದ್ದ ನಂತರ ಮತ ನೀಡಿದಂತಹ ವ್ಯಕ್ತಿಗಳು ಮತ್ತು ಬಡಾವಣೆಗಳಲ್ಲಿ ಕಾಣದ ಸ್ಥಿತಿಯಲ್ಲಿ ತನ್ನ ಯಶಸ್ಸಿನ ದಾರಿಯನ್ನೇ ಸದಾ ಹುಡುಕುತ್ತಾ ಕಾಲಕಳೆಯುತ್ತಿರುತ್ತಾರೆ.

  

ಬಡಾವಣೆಯ ಜನರು ಸಂಜೆ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಹೋಗುತ್ತಾರೆ. ಜೊತೆಯಲ್ಲಿ ತನ್ನ ಪುಟ್ಟ ಮಕ್ಕಳನ್ನು ಆಟವಾಡಿಸಲು ಅಲ್ಲದೇ ತನ್ನ ಸ್ನೇಹಿತರ ಜೊತೆಯಲ್ಲೇ ಕುಳಿತು ಮಾತನಾಡುವಂತಹ ಆಲೋಚನೆಗಳನ್ನು ಮಾಡಿಕೊಂಡಿರುತ್ತಾರೆ. ಒಂದು ಸುತ್ತು ಪಟ್ಟಣದ ಪಾರ್ಕ್‌ಗಳಿಗೆ ಭೇಟಿ ನೀಡಿದಾಗ ಉದ್ಯಾನವನದ ಗುಣಮಟ್ಟವು ತಿಳಿಯುತ್ತದೆ. ಕಾಮಗಾರಿಯ ಗುತ್ತಿಗೆ ತೆಗೆದುಕೊಳ್ಳುವ ಸಮಯದಲ್ಲಿ ಉದ್ಯಾನವನದ ಒಳಭಾಗದಲ್ಲಿ ಬೇಕಾಗಿರುವ ತಂತಿ ಬೇಲಿ, ಹೂವಿನ ಗಿಡಗಳು, ನಡೆದಾಡಲು ರಸ್ತೆ ವ್ಯವಸ್ಥೆ, ಕೂರುವ ಆಸನಗಳು, ಮಕ್ಕಳಿಗೆ ಜಾರುಬಂಡಿ, ಉಯ್ಯೆಲೆ ಹೀಗೆ ಹಲವಾರು ಮೂಲವ್ಯವಸ್ಥೆಗಳನ್ನು ಕಲ್ಪ್ಪಿಸಿಕೊಡಬೇಕಾಗಿತ್ತು. ಕೆಲವು ಬಡಾವಣೆಗಳ ಉದ್ಯಾನವನಗಳ ಕಾಮಗಾರಿ ನಡೆಯದೆ ತಂತಿ ಬೇಲಿ ಹಾಕಿರುವುದು ಕಾಣಸಿಗುತ್ತವೆ. ಅಲ್ಲದೇ ಕೆಲವು ಉದ್ಯಾನವನಗಳ ಒಳಭಾಗದಲ್ಲಿ ಅವಲಂಬಿಸಿರುವ ಆಸನಗಳು ಮುರಿದಿರುವುದು ನಿರ್ವಹಣೆ ಮಾಡದೆ ಹೂವಿನ ಗಿಡಗಳು, ಹುಲ್ಲಿನ ಹಾಸುಗಳು ಒಣಗಿ ಹೋಗಿದೆ. ಹಾಗೆಯೇ ಕೆಲವು ಉದ್ಯಾನವನಗಳ ಸಸ್ಯ ಜೀವಿಗಳಿಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಕೊಳವೆಬಾವಿ ಕೊರೆಸಿ ಯಾವ ಪ್ರಯೋಜನಕ್ಕೂ ಬಾರದ ಸ್ಥಿತಿಯಲ್ಲಿವೆ. ಅಲ್ಲದೆ ಕಸದ ರಾಶಿ ತುಂಬಿಹೋಗಿರುವುದನ್ನು ಕಂಡು ನಾಮಕ ವ್ಯವಸ್ಥೆಗಾಗಿ ಉದ್ಯಾನವನ ಮಾಡಿ ಹಣ ಮಾಡಿಕೊಳ್ಳುವ ಹುನ್ನಾರ ನಡೆದಿದೆಯೆಂದು ಪಟ್ಟಣದ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಪಂ ಆಡಳಿತ ಮಂಡಳಿಯು ಸಂಪೂರ್ಣವಾಗಿ ಯಾವುದೇ ಯೋಚನೆಗಳು ಇಲ್ಲದೆ ದಿನಗಳನ್ನು ಕಳೆಯುತ್ತಿರುವುದು ಕಂಡುಬರುತ್ತದೆ. ಸರಕಾರದಿಂದ ಬಿಡುಗಡೆಯಾದ ಹಣವನ್ನು ಟೆಂಡರ್ ಮೂಲಕ ಬಹಿರಂಗ ಏಲಂ ಕರೆದು ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಇಂತಹ ಅಸಮರ್ಪಕ ಕಾಮಗಾರಿಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜನಗಳಿಲ್ಲದಂತೆ ಪ್ರತಿನಿಧಿಗಳು ಮೌನವಹಿಸಿರುವುದನ್ನು ಸಂಶಯಕ್ಕೆ ಎಡೆಮಾಡಿದಂತೆ ಕಾಣುತ್ತದೆ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಉದ್ಯಾನವನದ ಕಡೆ ಗಮನ ಹರಿಸಿ ಸರಕಾರದ ಹಣ ವರ್ಥ್ಯವಾಗದಂತೆ ಅರ್ಧದಲ್ಲೇ ನಿಂತಿರುವಂತಹ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗುತ್ತದೆಯೇ ಎಂದು ಕಾದುನೋಡೋಣ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News