×
Ad

28ರಿಂದ ಕಾರವಾರ ಉತ್ಸವ

Update: 2016-04-05 22:27 IST

ಕಾರವಾರ, ಎ. 5: ಎಪ್ರಿಲ್ 28ರಿಂದ ಮೇ 1ರವರೆಗೆ ನಾಲ್ಕು ದಿನಗಳ ಕಾಲ ಮೂರನೆ ವರ್ಷದ ಕಾರವಾರ ಉತ್ಸವ-2016 ನಗರದ ಠಾಗೋರ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು, ಬೇರೆ ಬೇರೆ ಸಮಿತಿಗಳನ್ನು ರಚಿಸಲಾಗಿದೆ. ಸ್ಥಳೀಯ ಶಾಸಕ ಸತೀಶ್ ಕೆ.ಸೈಲ್ ಗೌರವಾಧ್ಯಕ್ಷರಾಗಿದ್ದು, ಗಂಗಾಧರ ಹಿರೇಗುತ್ತಿ ಸಂಚಾಲಕರಾಗಿದ್ದಾರೆ. ಗಣಪತಿ ಆರ್. ಮಾಂಗ್ರೆ ಅಧ್ಯಕ್ಷರಾಗಿ, ಡಾ. ಮಹೇಶ ಗೋಳಿಕಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜು ಪಾಟೀಲ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 20 ಉಪಾಧ್ಯಕ್ಷರು, 10 ಸಹ ಸಂಘಟನಾಕಾರರು ಸೇರಿದಂತೆ ಹತ್ತು ಉಪ ಸಮಿತಿಗಳನ್ನು ರಚಿಸಲಾಗಿದೆ. 25 ಕ್ಕೂ ಹೆಚ್ಚು ಸದಸ್ಯರಿರುವ ಮಹಿಳಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಉಷಾ ರಾಣೆ ಅಧ್ಯಕ್ಷೆಯಾಗಿದ್ದು, ಖೈರುನ್ನಿಸಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ವೇದಿಕೆ ಸಮಿತಿಗೆ ಮಾಧವ ರಾಣೆ, ಪ್ರಚಾರ ಸಮಿತಿಗೆ ಗಿರೀಶ್ ರಾವ್, ಸಾಂಸ್ಕೃತಿಕ ಸಮಿತಿಗೆ ಬಾಬು ಶೇಖ್, ವಸತಿ ಸಮಿತಿಗೆ ಮಾರುತಿ ರಾಣೆ, ಆರ್ಥಿಕ ಸಮಿತಿಗೆ ರಾಜೇಶ ಕಾಮತ್, ಭದ್ರತಾ ಸಮಿತಿಗೆ ರತ್ನಾಕರ್ ನಾಯ್ಕ, ಆಹಾರ ಸಮಿತಿಗೆ ದೀಪಕ ನಾಯ್ಕ, ಕ್ರೀಡಾ ಸಮಿತಿಗೆ ಪ್ರಕಾಶ ರೇವಣಕರ್, ಸನ್ಮಾನ ಸಮಿತಿಗೆ ಅಜಯ ಸಾಹುಕಾರ್, ಸ್ಟಾಲ್ ಹಾಗೂ ಅಮ್ಯೂಸ್‌ಮೆಂಟ್ ಸಮಿತಿಗೆ ದೇವಿದಾಸ್ ನಾಯ್ಕ, ಕಲಾವಿದರ ನಿರ್ವಹಣಾ ಸಮಿತಿಗೆ ಪ್ರಭುವರ ನಾಯಕ್ ಅಧ್ಯಕ್ಷರಾಗಿದ್ದಾರೆ ಎಂದು ಕಾರವಾರ ಉತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಜಾರ್ಜ್ ಫೆರ್ನಾಂಡಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News