×
Ad

ಜಗಜೀವನ್‌ರಾಮ್ ದೇಶ ಕಂಡ ಧೀಮಂತ ನಾಯಕ: ಸಚಿವ ದೇಶಪಾಂಡೆ

Update: 2016-04-05 22:28 IST

ಕಾರವಾರ, ಎ. 5: ಯುವಜನತೆಯ ಅಪ್ರತಿಮ ದೇಶಭಕ್ತ ಹಾಗೂ ಹುಟ್ಟು ಹೋರಾಟಗಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಡಾ.ಬಾಬುಜಗಜೀವನ್ ರಾಮ್ ಅವರ 109ನೆ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

  ಜಗಜೀವನ್ ರಾಮ್ ದೇಶ ಕಂಡ ಧೀಮಂತ ನಾಯಕ. ಬಡವರ, ದೀನದಲಿತರ ಹಕ್ಕಿಗೋಸ್ಕರ ಹಗಲಿರುಳು ಹೋರಾಟ ಮಾಡಿದರು. ಅವರ ಸ್ವಾವಲಂಬಿ ಜೀವನಕ್ಕೋಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅವರು ಕಾರ್ಯಗತಗೊಳಿಸಿದ ಜನಪರವಾದ ಯೋಜನೆಗಳಿಂದ ನಾಡಿನ ಜನರ ಪ್ರೀತಿ ಗಳಿಸಿದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಾಬುಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನತೆ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಶಿವರಾಮ್ ಹೆಬ್ಬಾರ್, ಶಾರದಾ ಶೆಟ್ಟಿ, ಸತೀಶ್ ಸೈಲ್, ಮಂಕಾಳು ವೈದ್ಯ, ಶ್ರೀಕಾಂತ್ ಘೋಟ್ನೇಕರ, ಪ್ರಭಾರ ಜಿಲ್ಲಾಕಾರಿ ಡಾ.ರಾಮಪ್ರಸಾದ್ ಮನೋಹರ್, ಪೊಲೀಸ್ ವರಿಷ್ಠ ವಂಶಿಕೃಷ್ಣ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News