ವಿವಿಗೆ ಸುವರ್ಣಾ ಗೌಡ 6ನೆ ರ್ಯಾಂಕ್
Update: 2016-04-05 22:30 IST
ಅಂಕೋಲಾ, ಎ. 5: ಕರ್ನಾಟಕ ವಿಶ್ವವಿದ್ಯಾನಿಲಯ ನಡೆಸಿದ 2013-14ನೆ ಸಾಲಿನ ಬಿ.ಇಡಿ. ವಾರ್ಷಿಕ ಪರೀಕ್ಷೆಯ ರ್ಯಾಂಕನ್ನು ಪ್ರಕಟಿಸಲಾಗಿದ್ದು, ಅಂಕೋಲಾದ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸುವರ್ಣಾ ಗೌಡ ಶೇ. 85.76 ಅಂಕ ಪಡೆದು ವಿಶ್ವವಿದ್ಯಾನಿಲಯಕ್ಕೆ 6ನೆ ರ್ಯಾಂಕ್ ಪಡೆದು ಸಂಸ್ಥೆಗೆ ಹಾಗೂ ಅಂಕೋಲಾಕ್ಕೆ ಹೆಮ್ಮೆ ತಂದಿದ್ದಾರೆ.
ಅವರ ಸಾಧನೆಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಅನಿಲ ಪಟ್ಟೇದ, ಸದಸ್ಯ ಕಾರ್ಯದರ್ಶಿ ಪ್ರಕಾಶ ಕಡಕೊಳ, ಸಂಯೋಜಕ ಡಾ.ಬಿ.ಸಿ.ಬನ್ನೂರು, ಸ್ಥಳೀಯ ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್.ನಟರಾಜ, ಸದಸ್ಯ ಡಾ. ಮಿನಲ್ ನಾರ್ವೇಕರ, ಪ್ರಾಚಾರ್ಯ ವಿನಾಯಕ ಜಿ. ಹೆಗಡೆ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.