ಎ.15ರೊಳಗೆ ಮುಂಗಡ ಹಣ ಪಾವತಿಗೆ ಸೂಚನೆ
ಬೆಂಗಳೂರು, ಎ.5: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ಖುರ್ರಾ(ಆನ್‌ಲೈನ್ ಲಾಟರಿ) ಹಾಗೂ ಮೀಸಲು ವಿಭಾಗಗಳಲ್ಲಿ ಆಯ್ಕೆಯಾಗಿರುವ ಪ್ರತಿಯೊಬ್ಬ ಯಾತ್ರಿಗಳು ಎ.15ರೊಳಗೆ ಮುಂಗಡ ಹಣ 81 ಸಾವಿರ ರೂ.ಯನ್ನು ಪಾವತಿಸುವಂತೆ ಭಾರತೀಯ ಹಜ್ ಸಮಿತಿಯು ಸೂಚನೆ ನೀಡಿದೆ.
ಬ್ಯಾಂಕಿನಲ್ಲಿ ಹಣ ಪಾವತಿಸಲು ಅನುಕೂಲವಾಗುವ ‘ಪೇ ಇನ್ ಸ್ಲಿಪ್’(ಹಣ ಜಮೆ ಮಾಡಲು ಬಳಸುವ ಅರ್ಜಿ)ಯನ್ನು ಭಾರತೀಯ ಹಜ್ ಸಮಿತಿಯ ವೆಬ್‌ಸೈಟ್ ಡಿಡಿಡಿ.ಚ್ಜ್ಚಟಞಞಜಿಠಿಠಿಛಿಛಿ.್ಚಟಞ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಹಜ್ ಮಾರ್ಗಸೂಚಿ ಪುಸ್ತಕ-2016ರೊಂದಿಗೆ ನೀಡಿರುವ ಪೇ ಇನ್ ಸ್ಲಿಪ್‌ನ್ನು ಬಳಸಿಕೊಳ್ಳಬಹುದು.
ಡಿಡಿಡಿ.ಚ್ಜ್ಚಟಞಞಜಿಠಿಠಿಛಿಛಿ.್ಚಟಞ ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗದರ್ಶನದಂತೆ ಆನ್‌ಲೈನ್ ಮೂಲಕವು ಮುಂಗಡ ಹಣ ಪಾವತಿಸಬಹುದು. ಅಥವಾ ಎಸ್‌ಬಿಐ ನಿರ್ವಹಿಸುತ್ತಿರುವ ಭಾರತೀಯ ಹಜ್ ಸಮಿತಿಯ ಬ್ಯಾಂಕ್ ಖಾತೆ ಸಂಖ್ಯೆ: 32175020010 ಊಉಉ ಖ್ಗಉ25 ಅಥವಾ ಯುಬಿಐ ನಿರ್ವಹಿಸುತ್ತಿರುವ ಖಾತೆ ಸಂಖ್ಯೆ: 318702010406009 (ಏಚ್ಜ ಅ್ಚ್ಚಟ್ಠ್ಞಠಿ) ಮೂಲಕ ಪಾವತಿಸಬಹುದು.
ಅಲ್ಲದೆ, ತಮ್ಮ ಮೂಲ ಪಾಸ್‌ಪೋರ್ಟ್(ಎರಡು ಝೆರಾಕ್ಸ್ ಪ್ರತಿಗಳು ಒಳಗೊಂಡಂತೆ), ಒಂದು ಬಣ್ಣದ ಭಾವಚಿತ್ರ ಹಾಗೂ ಪೇ ಇನ್ ಸ್ಲಿಪ್‌ನ ಪ್ರತಿಯನ್ನು ಎ.15ರೊಳಗೆ ನಗರದ ರಿಚ್ಮಂಡ್‌ರಸ್ತೆಯಲ್ಲಿರುವ ರಾಜ್ಯ ಹಜ್ ಸಮಿತಿಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗೆ ಕರ್ತವ್ಯದ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 5ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಮೂಲ ಪಾಸ್‌ಪೋರ್ಟ್‌ನ್ನು ಸಲ್ಲಿಸಿದ್ದರೆ, ಪೇ ಇನ್ ಸ್ಲಿಪ್ ಜೊತೆಗೆ ವೈದ್ಯಕೀಯ ಪರೀಕ್ಷಾ ಹಾಗೂ ದೈಹಿಕ ಸಾಮರ್ಥ್ಯ ದೃಢೀಕರಣ ಪ್ರಮಾಣ ಪತ್ರವನ್ನು ಹಜ್ ಸಮಿತಿ ಕಚೇರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ಖಾನ್‌ತಿಳಿಸಿದ್ದಾರೆ.
ಹಜ್‌ಯಾತ್ರೆಗೆ ತೆರಳುವ ಯಾತ್ರಿಗಳು ಹಜ್‌ಮಾರ್ಗಸೂಚಿ-2016ರಲ್ಲಿ ಸೂಚಿಸುವ ಅಳತೆ ಹಾಗೂ ತೂಕಕ್ಕೆ ಅನ್ವಯವಾಗುವಂತೆ ತಮ್ಮೆಂದಿಗೆ ಕೇವಲ ಎರಡು ಸೂಟ್‌ಕೇಸ್‌ಗಳು ಹಾಗೂ ಕೈ ಚೀಲವನ್ನು ತೆಗೆದುಕೊಂಡು ಹೋಗಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಯಾತ್ರಿಗಳ ಪ್ರಯಾಣವು ರದ್ದಾಗುವ ಸಾಧ್ಯತೆಗಳಿವೆ.
ಹಜ್‌ಯಾತ್ರೆಗೆ ಆಯ್ಕೆಯಾಗಿರುವಂತಹ ಯಾತ್ರಿಗಳು ನಿಗದಿತ ಅವಧಿಯೊಳಗೆ ಮುಂಗಡ ಹಣವನ್ನು ಪಾವತಿಸಬೇಕು. ಹಾಗೂ ತಮ್ಮ ಮೂಲ ಪಾಸ್‌ಪೋರ್ಟ್‌ಗಳನ್ನು ಹಜ್ ಸಮಿತಿಗೆ ತಲುಪಿಸಬೇಕು. ನಿಗದಿತ ಅವಧಿಯೊಳಗೆ ಹಣ ಹಾಗೂ ಪಾಸ್‌ಪೋರ್ಟ್ ಜಮೆ ಮಾಡದಿದ್ದರೆ ಅಂತಹವರ ಆಯ್ಕೆ ರದ್ದಾಗಲಿದ್ದು, ನಿರೀಕ್ಷಣಾ ಪಟ್ಟಿ(ವೇಟಿಂಗ್ ಲೀಸ್ಟ್)ಯಲ್ಲಿರುವ ಇತರ ಯಾತ್ರಿಗಳಿಗೆ ಅವರ ಸ್ಥಾನಗಳನ್ನು ನೀಡಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.