ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
Update: 2016-04-06 22:10 IST
ಮಡಿಕೇರಿ, ಎ. 6: ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಮತ್ತು ಸದಸ್ಯರ ರಾಜೀನಾಮೆ/ನಿಧನ ಮತ್ತಿತರ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಗೆ ಈಗಾಗಲೇ ನಾಮ ಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಎ.7 ನಾಮಪತ್ರ ಸಲ್ಲಿಸಲು ಕೊನೆಯದಿನವಾಗಿದೆ.
ಎ. 9ರಂದು ನಾಮಪತ್ರಗಳನ್ನು ಪರಿಶೀಲನೆ, ಎ. 11ರಂದು ಉಮೇದುವಾರಿಕೆಯನ್ನು ಹಿಂದೆಗೆದುಕೊಳ್ಳುವ ದಿನವಾಗಿದೆ. ಎ. 17ರಂದು ಮತದಾನ ಅವಶ್ಯವಿದ್ದರೆ, ಮತದಾನ ನಡೆಯಲಿದ್ದು, ಎ. 20ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆಯು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.