×
Ad

ಪ್ರಧಾನ ಮಂತ್ರಿ ಫಸಲ್ ಬಿಮಾ’ ಲಾಭದಾಯಕ ವಿಮೆ ಯೋಜನೆ: ಎಂ.ಕೆಪ್ರಾಣೇಶ್

Update: 2016-04-06 22:25 IST

ಮೂಡಿಗೆರೆ, ಎ.6: ಸಣ್ಣ ಕಂತಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ದೊಡ್ಡ ಲಾಭ ತರುವ ವಿಮೆ ಯೋಜನೆಯಾಗಿದೆ. ಈ ವಿಮೆ ಮಾಡಿಸುವುದರಿಂದ ರೈತರಿಗೆ ರಕ್ಷಣೆ, ಶಕ್ತಿ ಮತ್ತು ಅಭಿವೃದ್ಧಿ ಹೊಂದಬಹುದು ಎಂದು ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾನಿಲಯ ಆಶ್ರಯದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ರೈತರ ಸಮಾವೇಶ, ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಮಂತ್ರಿಯವರು ರೈತರ ಹಾಗೂ ಕೃಷಿಯ ಒಳಿತಿಗಾಗಿ ಸಾಕಷ್ಟು ಕಾರ್ಯಕ್ರಮವನ್ನು ಬ್ಯಾಂಕ್ ಮತ್ತು ಅಭಿವೃದ್ಧಿ ಇಲಾಖೆಗಳ ಮುಂಖಾತರ ಸಾಕಷ್ಟು ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಾಗಿದೆ. ರೈತ ಬಾಂಧವರು ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಸಬಲರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಪ್ರಧಾನ ಮಂತ್ರಿಯವರು ಈ ಯೋಜನೆಯು ಮಹತ್ವದಾಗಿದೆ. ರೈತರು ಈ ಯೋಜನೆಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಬೆಳೆಯುವ ಎಲ್ಲ್ಲ ಬೆಳೆಗಳಿಗೂ ತಪ್ಪದೆ ವಿಮೆ ಮಾಡಿಸಿ ಪರಿಸರ ವಿಕೋಪಗಳಿಂದಾಗುವ ಅನಾಹುತವನ್ನು ಎದುರಿಸಬೇಕು. ಬೆಳೆ ವಿಮೆ ರೈತರಿಗೆ ಹೊಸದೇನಲ್ಲ. ಆದರೆ ಹಳೇ ವಿಮೆ ಯೋಜನೆಗಳಿಗೆ ಹೋಲಿಸಿದರೆ ಕಂತು ಕಡಿಮೆ ಅಧಿಕ ಲಾಭದಾಯಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ತಾಂತ್ರಿಕ ಸಮಾವೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಲೀಡ್ ಬ್ಯಾಂಕ್‌ನ ಪ್ರಶಾಂತ್ ದೇಸಾಯಿ ಚಿಕ್ಕಮಗಳೂರು, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಅನುರಾಧಾಎ.ನರಹರಿ, ಬೆಂಗಳೂರು ಕೃಷಿ ವಿಮಾ ಕಂಪನಿ ಸಹಾಯಕ ವ್ಯವಸ್ಥಾಪಕ ಪ್ರವೀಣ್ ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ, ಜಂಟಿ ಕೃಷಿ ನಿರ್ದೇಶಕಿ ಎಂ.ಸಿ.ಸೀತಾ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಶಿವಪ್ರಕಾಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ.ನರೇಂದ್ರ, ತಾಪಂ ಸದಸ್ಯೆ ಭಾರತಿ ರವೀಂದ್ರ, ಬಿದರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ದಾರದಹಳ್ಳಿ ಗ್ರಾಪಂ ಅಧ್ಯಕ್ಷೆ ಲತಾ, ಬಿದರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ, ಗ್ರಾಪಂ ಸದಸ್ಯರಾದ ಲಿಯಾಖತ್ ಅಲಿ, ಎಚ್.ಕೆ. ಮನೋಜ್, ಕೃಷಿ ಕೇಂದ್ರದ ವಿಜ್ಞಾನಿಗಳಾದ ಟಿ.ಪಿ.ಭರತ್ ಕುಮಾರ್, ಡಾ.ಆರ್.ಗಿರೀಶ್, ಕು.ಮಮತಾ, ಕು. ಜಿ.ಎಸ್.ದೀಪ, ಎಲ್.ಶ್ರೀನಿವಾಸ್ ಪ್ರಸಾದ್, ಡಾ. ಎ.ವಿ.ಸ್ವಾಮಿ, ಡಾ. ಎ.ಟಿ.ಕೃಷಿಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News