ಮಂಡ್ಯ ಸಕ್ಕರೆ ಕಾರ್ಖಾನೆಯ ಚಿಮುಣಿ ಮೇಲೆ ಹತ್ತಿ ಕುಳಿತಿರುವ ನೌಕರರು..!
ಮಂಡ್ಯ,ಎ.7: ರಾಜ್ಯದ ಸರಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್ ನೌಕರರು ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಮಾಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಐದು ಮಂದಿ ನೌಕರರು ಕಾರ್ಖಾನೆಯ ಹೊಗೆ ಹೋಗುವ ಪೈಪ್‌ನ ಮೇಲೆ ಹತ್ತಿ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಮಂಡ್ಯ ಟೌನ್ ಬಡಾವಣೆಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ವೇತನ ದೊರೆಯದೆ ನೌಕಕರು ತೊಂದರೆ ಎದುರಿಸುತ್ತಿದ್ದಾರೆ. ಶುಕ್ರವಾರ ಯುಗಾದಿ ಹಬ್ಬವಾಗಿದ್ದರೂ ನೌಕರಿಗೆ ಹಬ್ಬದ ತಯಾರಿಗೆ ಜೇಬಿನಲ್ಲಿ ಹಣ ಇಲ್ಲ. ನೌಕರರು ಹಬ್ಬದ ಹೊತ್ತಿಗಾದರೂ ವೇತನವನ್ನು ಪಾವತಿಸುವಂತೆ ಮಾಡಿರುವ ಮನವಿಗೆ ಆಡಳಿತ ಸಮಿತಿ ಸ್ಪಂದಿಸಿಲ್ಲ. ಇದರಿಂದ ಗರಂ ಆಗಿರುವ ನೌಕರರು ಪ್ರತಿಭಟನೆಯನ್ನು ಚುರುಕುಗೊಳಿಸಿದ್ದಾರೆ. ಪೈಪ್ ಮೇಲೆ ಹತ್ತಿ ಕುಳಿತಿರುವ ನೌಕರರು ವೇತನ ನೀಡದಿದ್ದರೆ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಪೊಲೀಸರು, ಅಗ್ನಿಶಾಮಕದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.