×
Ad

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ; ಇಬ್ಬರು ದೈಹಿಕ ಶಿಕ್ಷಕರಿಗೆ ಎ.15ರ ತನಕ ಸಿಐಡಿ ಕಸ್ಟಡಿ

Update: 2016-04-07 13:40 IST

ಬೆಂಗಳೂರು, ಎ.7: ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಇಬ್ಬರು ದೈಹಿಕ ಶಿಕ್ಷಕರಿಬ್ಬರಿಗೆ  ಹೆಚ್ಚಿನ ವಿಚಾರಣೆಗಾಗಿ ಎಪ್ರಿಲ್‌ 15ರ ತನಕ ಸಿಐಡಿ ಕಸ್ಟಡಿ ವಿಧಿಸಲಾಗಿದೆ.
ಪ್ಯಾಲೇಸ್ ಗುಟ್ಟಹಳ್ಳಿಯ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಸತೀಶ್ ಹಾಗೂ ಸದಾಶಿವನವಗರದಲ್ಲಿರುವ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್ ಕುಮಾರ್  ಎಂಬವರನ್ನು ಸಿಐಡಿ ಪೊಲೀಸರು ಇಂದು ನಗರದ ೧ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಅವರಿಗೆ ಹೆಚ್ಚಿನ ವಿಚಾರಣೆಗಾಗಿ ಎ.೧೫ರ ತನಕ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿತು.
ಈ ಮೊದಲು ಬಂಧಿತ ಆರೋಪಿಗಳಾದ ಓಬಳ್‌ ರಾಜ್‌, ಮಂಜುನಾಥ್‌ ಮತ್ತು ರುದ್ರಪ್ಪ ಅವರು ಸಿಐಡಿ ಕಸ್ಟಡಿಯಲ್ಲಿ ವಿಚಾಣೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News