14 ಸಾವಿರ ಮಕ್ಕಳಿಗೆ ಬಿಸಿಯೂಟದ ವ್ಯವಸೆ್ಥ: ಸಿಇಒ ಕೆ.ರಾಕೇಶ್‌ಕುಮಾರ್
ಶಿವಮೊಗ್ಗ, ಎ. 7: ಪ್ರಸ್ತುತ ಬೇಸಿಗೆಯ ರಜೆ ಅವಧಿ ಯಲ್ಲಿ ಜಿಲ್ಲೆಯ ಸೊರಬ ತಾಲೂಕಿನ ಸುಮಾರು 14 ಸಾವಿರ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿ
ಇಒ) ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೊರಬ ತಾಲೂಕನ್ನು ರಾಜ್ಯ ಸರಕಾರ ಬರ ಪೀಡಿತ ಎಂದು ಘೋಷಿ ಸಿದೆ. ಈ ತಾಲೂಕಿನಲ್ಲಿ ಒಟ್ಟಾರೆ ಸುಮಾರು 26 ಸಾವಿರ ಪ್ರೌಢ-ಪ್ರಾಥಮಿಕ ಶಾಲೆಯ ಮಕ್ಕಳಿದ್ದಾರೆ. ಇದರಲ್ಲಿ ಬೇಸಿಗೆಯ ರಜಾ ಅವಧಿಯಲ್ಲಿಯೂ ಬಿಸಿಯೂಟ ವ್ಯವಸ್ಥೆ ಕಲ್ಪಿಸ ಬೇಕೆಂದು ತಿಳಿಸಿದ ಅವರು, 14 ಸಾವಿರ ಮಕ್ಕಳಿಗೆ ಬಿಸಿಯೂಟ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ
. ಜಿಲ್ಲೆಯ ಇತರ ತಾಲೂಕುಗಳ ಶಾಲೆಗಳಲ್ಲಿ ಬಿಸಿಯೂಟ ಕಲ್ಪಿಸುವ ಬಗ್ಗೆ ಇಲ್ಲಿಯವರೆಗೂ ಯಾವುದೇ ಪ್ರಸ್ತಾವನೆಗಳು ಬಂದಿಲ್ಲ. ಶಾಲಾ ಮಕ್ಕಳೇನಾದರೂ ಬಿಸಿಯೂಟ ಕಲ್ಪಿಸುವಂತೆ ಮನವಿ ಮಾಡಿದರೆ, ಬಿಸಿ ಯೂಟ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿಇಒರವರು ಸ್ಪಷ್ಟಪಡಿಸಿದ್ದಾರೆ. ಅನುದಾನ ಬಿಡುಗಡೆ: ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕು ಆಡಳಿತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಆದ್ಯತೆಯ ಮೇಲೆ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು. ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ 50 ಲಕ್ಷ ರೂ. ಅನುದಾನವನ್ನು ರಾಜ್ಯ ಸರಕಾರ ಬಿಡು ಗಡೆಗೊಳಿಸಿದೆ. ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್ ಸಮಿತಿಯಸಭೆಯಲ್ಲಿ ಅನುದಾನ ಬಳಕೆಗೆ ಅಗತ್ಯ ಕ್ರಮಕೈಗೊಳ್ಳ ಲಾಗುವುದು ಎಂದರು. ಬುಧವಾರ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಸಕಿ ಶಾರದಾ ಪೂರ್ಯಾನಾಯ್ಕೆರವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯ ಸಭೆ ನಡೆಯಿತು. ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವವಾಗುವ ಗ್ರಾಮಗಳನ್ನು ಗುರುತಿಸಿ, ಕೈಗೊಳ್ಳಬಹುದಾದ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ. ಗಂಭೀರ ಸ್ವರೂಪದಲ್ಲಿಲ್ಲ
ಜಿ
ಲ್ಲೆಯಲ್ಲಿ ಇಲ್ಲಿಯವರೆಗೂ ಗಂಭೀರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸ್ಥಿತಿಯಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವವಾಗಬಹುದಾದ ಗ್ರಾಮಗಳನ್ನು ಗುರುತಿಸಿ, ಈಗಾಗಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಹಾಸ್ಟೆಲ್‌ಗಳಿಗೆ ಸೌಲಭ್ಯ: ಜಿಲ್ಲಾ ಪಂಚಾಯತ್ ಅಧೀನದಲ್ಲಿರುವ ಹಾಸ್ಟೆಲ್‌ಗಳ ಕಾರ್ಯನಿರ್ವಹಣೆ ಉತ್ತಮಗೊಳಿಸಲು ಒತ್ತು ನೀಡಲಾಗುವುದು. ಮೂಲಸೌಕರ್ಯದಲ್ಲಿ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೇಸಿಗೆಯ ಅವಧಿಯಾಗಿರುವುದರಿಂದ ಅಗತ್ಯವಿರುವೆಡೆ ಹಾಸ್ಟೆಲ್‌ಗಳಿಗೆ ಫ್ಯಾನ್ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು. 279 ಶಾಲೆಗಳಲ್ಲಿ ಬಿಸಿಯೂಟ
ಸೊರಬ ತಾಲೂಕಿನಲ್ಲಿ ಸರಕಾರಿ ಹಾಗೂ ಅನುದಾನಿತ ಸೇರಿದಂತೆ ಒಟ್ಟಾರೆ 348 ಪ್ರೌಢ ಹಾಗೂ ಹಿರಿಯ-ಕಿರಿಯ ಪ್ರಾಥಮಿಕ ಶಾಲೆಗಳಿವೆ. ಒಟ್ಟಾರೆ ಸುಮಾರು 26 ಸಾವಿರದಷ್ಟು ಮಕ್ಕಳಿದ್ದಾರೆ. ಇದರಲ್ಲಿ 279 ಶಾಲೆಗಳ 14 ಸಾವಿರ ಮಕ್ಕಳಿಗೆ ಬೇಸಿಗೆಯ ರಜೆ ಅವಧಿಯಲ್ಲಿಯೂ ಬಿಸಿಯೂಟ ಕಲ್ಪಿಸಲಾಗುತ್ತಿದೆ.
ಪ್ರಸ್ತುತ ಬಿಸಿಯೂಟ ಕೊಡಲು ಗುರುತಿಸಿರುವ ಶಾಲೆಗಳ ಬಿಸಿಯೂಟ ತಯಾರಕರಿಗೂ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಡಿಪಿಐ)ಯ ಉಪ ನಿರ್ದೇಶಕ ನಾರಾಯಣಗೌಡ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.