ಉ.ಕ: ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ
ಕಾರವಾರ, ಎ. 7: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ಈಗಾಗಲೇ ರಚಿಸಲಾಗಿದ್ದು, ಸಾರ್ವ ಜನಿಕರು ಪೊಲೀಸರ ವಿರುದ್ಧ ಏನಾದರೂ ಅಹವಾಲು, ದೂರುಗಳಿದ್ದರೆ ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಜಿಲ್ಲಾ ದೂರು ಪ್ರಾಧಿಕಾರದಲ್ಲಿ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅಧ್ಯಕ್ಷರಾಗಿದ್ದು, ಆರ್.ಜೆ.ಜೋಶಿ, ನಿವೃತ್ತ ಸೆಲೆಕ್ಷನ್ ಗ್ರೇಡ್, ಕೆ.ಎ.ಎಸ್. ಅಧಿಕಾರಿ ಮತ್ತು ನಿರ್ಮಲ ಗಾಂವ್ಕರ ನಿವೃತ್ತ ಉಪಾಧ್ಯಾಯರು ಅಂಕೋಲಾ ಸದಸ್ಯರಾಗಿರುವರು. ಜಿಲ್ಲಾ ಎಸ್ಪಿ ಅವರು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ಸಿಬ್ಬಂದಿಯ ಪೊಲೀಸ್ ಅಭಿರಕ್ಷೆಯಲ್ಲಿ ನಡೆದ ಸಾವು, ತೀವ್ರ ಸ್ವರೂಪದ ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದು.
ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ಸಿಬ್ಬಂದಿಯ ದುರ್ನಡತೆ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ಜಿಲ್ಲಾ ಪ್ರಾಧಿಕಾರ ವಿಚಾರಣೆ ನಡೆಸಲಿದೆ. ಡಿಎಸ್ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಯ ವಿರುದ್ಧದ ದೂರನ್ನು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು. ನೇರವಾಗಿ ತೀವ್ರ ದುರ್ನಡತೆ ದೂರುಗಳನ್ನು ಸ್ವೀಕರಿಸಿದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸುವುದು. ಸಾರ್ವಜನಿಕರು ದೂರುಗಳನ್ನು ಪೊಲೀಸ್ ಅಧೀಕ್ಷ ಕರು, ಉತ್ತರ ಕನ್ನಡ ಜಿಲ್ಲೆ, ಎಂ.ಜಿ.ರಸ್ತೆ, ಕಾಜುಬಾಗ, ಕಾರವಾರ- 581301 , ದೂರವಾಣಿ ಸಂಖ್ಯೆ: 08382-226233 ಇವರಿಗೆ ಸಲ್ಲಿಸಬಹುದು. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸು ವಂತಿದ್ದಲ್ಲಿ ಅಧ್ಯಕ್ಷರು, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಕೊಠಡಿ ಸಂ:36 ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01 ದೂರವಾಣಿ ಸಂ: 22386063, 22034220 ಗೆ ದೂರನ್ನು ಸಲ್ಲಿಸುವಂತೆ ಅವರು ಕೋರಿದ್ದಾರೆ.