ದ್ವಿತೀಯ ಪಿಯು ವೌಲ್ಯ ಮಾಪನ ವಿಚಾರ: ಪರ್ಯಾಯ ವ್ಯವಸ್ಥೆಗೆ ಚಿಂತನೆ: ಕಿಮ್ಮನೆ

Update: 2016-04-08 08:21 GMT

ಬೆಂಗಳೂರು, ಎ.8: ದ್ವಿತೀಯ ಪಿಯು ವೌಲ್ಯ ಮಾಪನವನ್ನು ಬಹಿಷ್ಕರಿಸಿರುವ ಉಪನ್ಯಾಸಕರಿಗೆ ನಾವು ಬಗ್ಗುವುದಿಲ್ಲ. ಎ.13 ರಿಂದ ಪರ್ಯಾಯ ವ್ಯವಸ್ಥೆಗೆ ಸರಕಾರ ಚಿಂತಿಸಲಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

‘‘ಸಿಎಂ ಹಾಕಿದ್ದ ಬೌಂಡರಿಯನ್ನು ಮೀರಿ ಉಪನ್ಯಾಸಕರಿಗೆ ನಾನು ಭರವಸೆ ನೀಡಿದ್ದೆ. ಆದರೆ, ನನ್ನ ಭರವಸೆಯನ್ನು ಪ್ರತಿಭಟನಾ ನಿರತ ಉಪನ್ಯಾಸಕರು ಒಪ್ಪಿಲ್ಲ. ಪೋಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೌಲ್ಯ ಮಾಪನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ’’ ಎಂದು ರತ್ನಾಕರ್ ತಿಳಿಸಿದರು.

‘‘2008ರಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ನಡೆದಿದ್ದು, ಈ ಪ್ರಶ್ನೆ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನನ್ನಿಂದಲೇ ಆರಂಭವಾಗಲಿ’’ ಎಂದು ರತ್ನಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News