ಯಡಿಯೂರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷಸ್ಥಾನದ ಪಟ್ಟ
<ಬಿ. ರೇಣುಕೇಶ್
ಶಿವಮೊಗ್ಗ, ಎ. 9: ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜಿತವಾಗುತ್ತಿದ್ದಂತೆ, ಅವರ ತವರೂರು ಶಿವಮೊಗ್ಗ ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ಸಂಚಲನ ಸೃಷ್ಟಿಸಿದೆ. ಮತ್ತೆ ಶಿವಮೊಗ್ಗವು ಬಿಜೆಪಿ ರಾಜಕಾರಣದ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಯಡಿ ಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನದ ಗದ್ದುಗೆ ಅಲಂಕರಿಸುತ್ತಿರುವುದು ವಿಶೇಷವಾಗಿ ಅವರ ತವರೂರಿನ ಬೆಂಬಲಿಗರಲ್ಲಿ ಹೊಸ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಇನ್ನು ಮುಂದಾ ದರೂ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಜವಾ ಬ್ದಾರಿ ಲಭಿಸುವ ಆಶಾಭಾವನೆ ಅವರದ್ದಾಗಿದೆ. ಪಕ್ಷದಲ್ಲಿ ಮನೆ ಮಾಡಿದ್ದ ‘ಮಲತಾಯಿ’ ನೀತಿ ಧೋರಣೆಯಿಂದ ಮುಕ್ತವಾಗುವ, ಬಿಜೆಪಿ- ಕೆಜೆಪಿ ದಾಯಾದಿ ಕಲಹಕ್ಕೆ ಪೂರ್ಣವಿರಾಮ ಬೀಳುವ ನಿರೀಕ್ಷೆಯಲ್ಲಿದ್ದಾರೆ. ‘ಇಷ್ಟು ದಿನ ಯಡಿಯೂರಪ್ಪರ ಬೆಂಬಲಿ ಗರೆಂಬ ಕಾರಣಕ್ಕಾಗಿಯೇ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ, ಜವಾಬ್ದಾರಿ ಸಿಗದೆ ವಂಚಿತವಾಗುವಂತಾಗಿತ್ತು. ಪಕ್ಷ ಬಿಟ್ಟು ಹೋದವರೆಂಬ ಏಕೈಕ ಕಾರಣದಿಂದಲೇ ನಾನಾ ರೀತಿಯ ಆಪಾದನೆಗಳಿಗೆ ಒಳಗಾಗಿದ್ದೆವು. ಇದರಿಂದ ಮಾನಸಿಕವಾಗಿ ಸಾಕಷ್ಟು ತೊಳಲಾಟಕ್ಕೆ ಒಳಗಾಗಿದ್ದೆವು. ಆದರೆ ಯಡಿಯೂರಪ್ಪರ ಮೇಲಿದ್ದ ಅಭಿಮಾನದಿಂದ ಇವೆಲ್ಲವನ್ನೂ ಸಹಿಸಿಕೊಂಡಿದ್ದೆವು. ಇದೀಗ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜಿತವಾಗುತ್ತಿರುವುದರಿಂದ ಇನ್ನು ಮುಂದೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕುವ ವಿಶ್ವಾಸ ಸಹಜವಾಗಿಯೇ ಅವರ ಬೆಂಬಲಿಗರದ್ದಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಎಸ್‌ವೈ ಆಪ್ತರೊಬ್ಬರು ಅಭಿಪ್ರಾಯಪಡುತ್ತಾರೆ. ಮರೆಯಾಗದ ಕೆಜೆಪಿ!:
ಬಿಎಸ್‌ವೈರವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದ ವೇಳೆ, ಅವರೊಂದಿಗೆ ಅಪಾರ ಸಂಖ್ಯೆಯ ಬಿಜೆಪಿ ಮುಖಂಡರು ಹಿಂಬಾಲಿಸಿದ್ದರು. ಬದಲಾದ ರಾಜಕೀಯ ಸನ್ನಿವೇ ಶದಲ್ಲಿ ಬಿಎಸ್‌ವೈರವರು ಮತ್ತೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು. ಆದರೆ ಬಿಜೆಪಿಯಲ್ಲಿ ಬಿಎಸ್‌ವೈಗೆ ಮೊದಲಿದ್ದಷ್ಟು ಪ್ರಾಮುಖ್ಯತೆಯಿಲ್ಲವಾಗಿತ್ತು. ಕೆಜೆಪಿ ಕರಿಛಾಯೆಯ ಕರಿನೆರಳು ಮರೆಯಾಗಿರಲಿಲ್ಲ. ಇದನ್ನು ಅವರ ಆಪ್ತರೇ ಹೇಳುತ್ತಾರೆ. ಬಿಜೆಪಿ ಪಾಳೇಯದಲ್ಲಿ ಒಳಗೊಳಗೆ ಬಿಜೆಪಿ-ಕೆಜೆಪಿ ದಾಯಾದಿ ಕಲಹ ಮುಂದುವರಿದಿತ್ತು. ಬಿಜೆಪಿ ಸಂಘಟನೆಯಲ್ಲಿ ಬಿಎಸ್‌ವೈ ಬೆಂಬ ಲಿಗರಿಗೆ ಸೂಕ್ತ ಸ್ಥಾನಮಾನ, ಜವಾ ಬ್ದಾರಿಗಳು ಸಿಗದಂತಾಗಿತ್ತು. ಮತ್ತೊಂದೆಡೆ ಬಿಎಸ್‌ವೈ ಕೂಡ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡಲು ಆಗದ ಸ್ಥಿತಿಯಲ್ಲಿದ್ದರು. ಹಲವು ಬೆಂಬಲಿಗರು ಬಿಎಸ್‌ವೈ ಬಳಿ ತಮ್ಮ ಅಳಲು ಕೂಡ ತೊಡಿಕೊಂಡಿದ್ದರು. ಭವಿಷ್ಯದಲ್ಲಿ ಎಲ್ಲವೂ ಸರಿಯಾಗಲಿದೆ. ಅನುಸರಿಸಿಕೊಂಡು ಹೋಗಿ ಎಂದು ಬಿಎಸ್‌ವೈ ಸಮಾಧಾನ ಮಾಡಿ ಕಳುಹಿಸುತ್ತಿದ್ದರು ಎಂದು ಬೆಂಬಲಿಗರೊಬ್ಬರು ಹೇಳುತ್ತಾರೆ. ಒಟ್ಟಾರೆ ಯಡಿಯೂರಪ್ಪರವರು ಕಮಲ ಪಾಳೇಯದ ರಾಜ್ಯ ಅಧಿಪತಿಯಾಗಿ ನಿಯೋಜನೆಗೊಂಡಿರುವುದಕ್ಕೆ ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ಸಂಚಲನ ಮೂಡಿಸಿರುವುದಂತೂ ಸತ್ಯವಾಗಿದೆ. ರಾಜ್ಯ ರಾಜಕಾರಣಕ್ಕಿಂತ ಬಿಜೆಪಿ ಸಂಘಟನೆಯಲ್ಲಿ ಇದು ಯಾವ ಬದಲಾವಣೆ ತರಲಿದೆ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಮುಖಂಡರ ಅಭಿಪ್ರಾಯಗಳು....:
ಜಿಲ್ಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ
ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾ ಧ್ಯಕ್ಷರಾಗಿ ನೇಮಕವಾಗಿರುವುದರಿಂದ ಅವರ ತವರು ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಪಕ್ಷದ ಸಂಘಟನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಸುಭದ್ರವಾಗಿದೆ.
<ಎಂ.ಶ್ರೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ
................................................................
ಹುದ್ದೆಗಾಗಿ ಜಿಲ್ಲೆಯ ಅಭಿವೃದ್ಧಿ ಮರೆತರು
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಶಿವಮೊಗ್ಗ ಕ್ಷೇತ್ರದ ಲೋಕ ಸಭಾ ಸದಸ್ಯರೂ ಆದ ಬಿ.ಎಸ್.ಯಡಿ ಯೂರಪ್ಪ, ಕೇವಲ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಕಾರ್ಯತಂತ್ರದಲ್ಲಿಯೇ ಸಮಯ ಹಾಳು ಮಾಡಿದ್ದಾರೆ. ಸಂಸದರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮ ಹಾಕಲಿಲ್ಲ. ಇದು ಜಿಲ್ಲೆಯ ಜನತೆಗೆ ಮಾಡಿದ ದ್ರೋಹವಾಗಿದೆ.
<
ವೈ.ಎಚ್.ನಾಗರಾಜ್, ಕಾಂಗ್ರೆಸ್ ಮುಖಂಡ
....................................................................
ಜನನಾಯಕನಿಗೆ ಸಂದ ಗೌರವ
ಬಿ.ಎಸ್.ಯಡಿಯೂರಪ್ಪರವರು ಓರ್ವ ಜನನಾಯಕರಾಗಿದ್ದಾರೆ. ರಾಜ್ಯ ರಾಜಕಾರಣ ಕಂಡ ಅಪರೂಪದ ರಾಜಕಾರಣಗಳಲ್ಲಿ ಓರ್ವರಾಗಿದ್ದಾರೆ. ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುತ್ತಿದ್ದಂತೆ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗಿದೆ. <