×
Ad

ಲಾರಿ ತಡೆದು ಸ್ಥಳೀಯರ ಪ್ರತಿಭಟನೆ

Update: 2016-04-09 22:04 IST

ಮೂಡಿಗೆರೆ, ಎ.9: ಅಂಗಡಿ ಗ್ರಾಮದ ಹೇಮಾವತಿ ನದಿಯಿಂದ ಗೋಣಿಬೀಡು ಠಾಣಾಧಿಕಾರಿಯ ಸೀಲ್ ಮತ್ತು ಸಹಿಯುಳ್ಳ ಕೈಬರಹದ ಚೀಟಿಯೊಂದಿಗೆ ಚಿಕ್ಕಮಗಳೂರು ಮಾರ್ಗವಾಗಿ ಮರಳು ಸಾಗಿಸುತ್ತಿದ್ದ ಸುಮಾರು 8 ಮರಳು ಲಾರಿಗಳನ್ನು ಪಟ್ಟಣದ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಸಾರ್ವಜನಿಕರು ತಡೆದು ಶನಿವಾರ ಪ್ರತಿಭಟನೆ ನಡೆಸಿದರು.

      

ಸತತ ಎರಡು ದಿನಗಳ ರಜೆಯ ಮಧ್ಯೆ ಅಧಿಕಾರಿಗಳು ಇಲ್ಲದ ಸಮಯದಲ್ಲಿ ಮರಳು ಸಾಗಣೆಗೆ ಯಾರು ಅನುಮತಿ ನೀಡಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಸಂದೇಹಗಳಿದ್ದವು. ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಆರೋಪಗಳಿದ್ದು, ಅಲ್ಲದೆ ಅದೇ ಸಮಯದಲ್ಲಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಾಟವನ್ನು ಗಮನಿಸಿದ ಸ್ಥಳೀಯರು ಪಿಡಬ್ಲೂಡಿ ಇಲಾಖಾಧಿಕಾರಿಗಳಿಗೆ ಕರೆ ಮಾಡಿದಾಗ ನಾವು ಯಾವುದೇ ರೀತಿ ಮರಳಿನ ಸಾಗಾಟಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿಸಿದರು. ಇದರಿಂದ ಕೆರಳಿದ ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿ ಪ್ರತಿಭಟಿಸಿದರು. ಮರಳು ಸಾಗಣೆ ಮಾಡಲು ರಹದಾರಿಗೆ ಆನ್‌ಲೈನ್ ಮೂಲಕವೇ ಸರಕಾರಕ್ಕೆ ರಾಜಸ್ವ ಪಾವತಿಸಿದ ನಂತರ ಅನುಮತಿ ನೀಡುವುದರಿಂದ ರಜಾ ದಿನಗಳಲ್ಲಿ ಸಾಗಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಎಲ್ಲಾ ಲಾರಿಗಳಲ್ಲಿ ಗೋಣಿಬೀಡು ಠಾಣೆಯ ಹೆಸರಲ್ಲಿ ಕೈ ಬರಹದ ಚೀಟಿಯಲ್ಲಿ ಸೀಲು ಮತ್ತು ಸಹಿ ಇದ್ದುದನ್ನು ಕಂಡು ನಕಲಿ ಸೀಲು ಮತ್ತು ಸಹಿ ನಕಲಿ ಎಂಬ ಶಂಕೆಯಿಂದ ವಿವಿಧ ಸಂಘಟನೆಗಳು, ಮರಳು ಬಳಕೆದಾರರ ವೇದಿಕೆ ಹಾಗೂ ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News