×
Ad

ಕಡೂರು: ರಾಜ್ಯ ಸರಕಾರದ ಬೆಳಕು ಯೋಜನೆಗೆ ದತ್ತ ಚಾಲನೆ

Update: 2016-04-09 22:14 IST

ಡೂರು, ಎ.9: ಕಡೂರು ಮತ್ತು ತರೀಕೆರೆ ಮೆಸ್ಕಾಂ ಕಚೆೇರಿ ವ್ಯಾಪ್ತಿ ಯಲ್ಲಿ 1 ಲಕ್ಷ ವಿದ್ಯುತ್ ಗೃಹ ಬಳಕೆ ಗ್ರಾಹಕರಿದ್ದು, ಪ್ರತಿ ಗ್ರಾಹಕರು 9 ವ್ಯಾಟ್ ಎಲ್‌ಇಡಿ ಬಲ್ಪ್ ಖರೀದಿಸಿ ಬಳಕೆ ಮಾಡಿದರೆ 20 ಲಕ್ಷ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಶಾಸಕ ವೈಎಸ್‌ವಿ ದತ್ತ ಹೇಳಿದರು.

ಅವರು ಪಟ್ಟಣದ ಮೆಸ್ಕಾಂ ಕಚೆೇರಿ ಅವರಣದಲ್ಲಿ ರಾಜ್ಯ ಸರಕಾರದ ಬೆಳಕು ಯೋಜನೆಗೆ ಸರಳ ಸಮಾರಂಭದಲ್ಲಿ ಚಾಲನೆ ನೀಡಿ ಮಾತನಾಡಿದರು. ಸರಕಾರ 80 ರೂ. ಗೆ ಎಲ್‌ಇಡಿ ಬಲ್ಪ್ ವಿತರಿಸುತ್ತಿದ್ದು, ಗೃಹ ಬಳಕೆ ಗ್ರಾಹಕರು ಪಡೆದು ವಿದ್ಯುತ್ ಉಳಿತಾಯ ಮಾಡುವಂತೆ ಮನವಿ ಮಾಡಿದರು.

 ಸಹಾಯಕ ಕಾರ್ಯಪಾಲಕ ಅಭಿಯಂತರ ಚಿದಾನಂದ್ ಮಾತನಾಡಿ, ಪಟ್ಟಣದ ಪುರಸಭೆೆ, ತಾಲೂಕು ಕಚೆೇರಿ, ಮೆಸ್ಕಾಂ ಕಚೇರಿ, ಕೆಎಸ್‌ಆರ್ಟಿಸಿ ಬಸ್ ನಿಲ್ದಾಣ ಸೇರಿದಂತೆ ಮುಂತಾದ ಸರಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳು ಈ ಎಲ್‌ಇಡಿ ಬಲ್ಪ್‌ಗಳನ್ನು ಉಪಯೋಗಿಸಿದಲ್ಲಿ ವಿದ್ಯುತ್ ಉಳಿತಾಯವಾಗಲಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಈ ಸ್ಥಳಗಳಲ್ಲೂ ಸಹ ಬಲ್ಬ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್‌ನ ಹರೀಶ್ ಪಾಟೀಲ್ ಮಾತನಾಡಿ, ಓರ್ವ ಗ್ರಾಹಕರ 1 ಗುರುತಿನ ಚೀಟಿಗೆ 10 ಬಲ್ಪ್ ವಿತರಿಸಲಾಗುವುದು. ಗ್ರಾಹಕರು ತಪ್ಪದೇ ತಮ್ಮ ಗುರುತಿನ ಚೀಟಿಯನ್ನು ತಂದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದಭರ್ದಲ್ಲಿ ಪಟ್ಟಣ ವ್ಯಾಪ್ತಿಯ ಕಿರಿಯ ಅಭಿಯಂತರೆ ಚೈತ್ರಾ, ಗ್ರಾಮಾಂತರ ವಿಭಾಗದ ಪ್ರಸನ್ನಕುಮಾರ್ ಹಾಗೂ ಮೆಸ್ಕಾಂನ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ರಮ ಮದ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News