×
Ad

ಕತ್ತಲೆಕಾಡಿನಲ್ಲಿ ಸ್ವಚ್ಛತಾ ಅಭಿಯಾನ

Update: 2016-04-10 23:08 IST

ಮಡಿಕೇರಿ, ಎ.10: ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಗ್ರಾಮ ಪರಿಕಲ್ಪನೆಯೊಂದಿಗೆ ಕಡಗದಾಳು ಗ್ರಾಮ ಪಂಚಾಯತ್‌ನ ಕತ್ತಲೆಕಾಡು ಯುವಕರು ಆರಂಭಿಸಿರುವ ಸ್ವಚ್ಛ ಕತ್ತಲೆಕಾಡು ವಾಟ್ಸ್‌ಆ್ಯಪ್ ಬಳಗದ ಮುಂದಾಳತ್ವದಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಜರಗಿತು.

ಸ್ವಚ್ಛತಾ ಶ್ರಮದಾನದ ಮೂಲಕ ಗ್ರಾಮದ ಯುವಕರು ಹಾಗೂ ಸಾರ್ವಜನಿಕರು ಯುಗಾದಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಗ್ರಾಮದ ಕೆಲವು ಯುವಕರು ಚರ್ಚಿಸಿ ವಾಟ್ಸ್‌ಆ್ಯಪ್‌ಗ್ರೂಪ್ ಆರಂಭಿಸಿದ್ದು, 47 ಮಂದಿ ಸದಸ್ಯರಿದ್ದಾರೆ. ಇವರು ಗ್ರಾಮಸ್ಥರ ಬೆಂಬಲದೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ಗ್ರಾಪಂ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಸದಸ್ಯರಾದ ಪುಷ್ಪಾವತಿ ರೈ, ರಮೇಶ್ ರೈ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಕತ್ತಲೆಕಾಡು, ಕ್ಲೋಸ್‌ಬರ್ನ್, ಆಶ್ರಯ ಕಾಲನಿ ಭಾಗದ ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿ ಸ್ವಚ್ಛ ಮಾಡಲಾಯಿತು. ಪ್ರಮುಖವಾಗಿ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳನ್ನು ತೆರವು ಮಾಡಲಾಯಿತು. ಕತ್ತಲೆಕಾಡು ಯುವಕರ ಕಾರ್ಯಕ್ಕೆ ಮಡಿಕೇರಿ ಗ್ರೀನ್ ಸಿಟಿ ಫೋರಂ ಬೆಂಬಲ ವ್ಯಕ್ತಪಡಿಸಿತು. ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯಾ ಪಾಲ್ಗೊಂಡು ಗ್ರಾಮಸ್ಥರಿಗೆ ಸ್ವಚ್ಛತೆಯ ಪ್ರಮಾಣ ವಚನ ಬೋಧಿಸಿದರು. ಸದಸ್ಯ ಬಿ.ಜಿ. ಅನಂತಶಯನ, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಫೋರಂ ಕಾರ್ಯದರ್ಶಿ ಐತಿಚಂಡ ರಮೇಶ್ ಉತ್ತಪ್ಪ, ಸದಸ್ಯರಾದ ಅಂಬೆಕಲ್ ನವೀನ್, ರತನ್ ತಮ್ಮಯ್ಯ, ಕುಕ್ಕೇರ ಜಯ ಚಿಣ್ಣಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News