×
Ad

ಚಿಕ್ಕಮಗಳೂರು: ಬಿರಂಜಿ ಹೊಳೆ ಸೇತುವೆಗೆ ಶಂಕುಸಾ್ಥಪನೆ: ಶಾಸಕ ಬಿ.ಬಿ.ನಿಂಗಯ್ಯ

Update: 2016-04-10 23:19 IST

ಚಿಕ್ಕಮಗಳೂರು, ಎ.10: 2.5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಿರಂಜಿ ಹೊಳೆ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.

ಅವರು ಮಾವಿನಕೆರೆಯಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ 7 ದಶಕಗಳ ಹಿಂದೆ ಬಿರಂಜಿ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಈಗ ಅದು ಶಿಥಿಲಾವಸ್ಥೆಯಲ್ಲಿರುವ ಕಾರಣ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹಾಗಾಗಿ ಗ್ರಾಮಸ್ಥರ ಮನವಿ ಮೇರೆಗೆ 2.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

     2.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಾಂಪುರ, ಮಳಲೂರು - ಮಾವಿನಕೆರೆ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆ. ಸದ್ಯದಲ್ಲೇ ಡಾಂಬರೀಕರಣಕ್ಕೆ ಚಾಲನೆ ನೀಡಿ ಗ್ರಾಮಸ್ಥರಿಗೆ ಅನುಕೂಲಕ್ಕೆ ಕಲ್ಪಿಸಲಾಗುವುದು. ನೆರಡಿ - ಕದ್ರಿಮಿದ್ರಿ ವರೆಗಿನ 11 ಕಿ.ಮೀ. ರಸ್ತೆಯನ್ನು 7.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಸರಿಕೆ, ಮುಡವಾಳೆ ಮತ್ತು ಬಕ್ಕಿ-ಬೆಟಗೆರೆ ರಸ್ತೆಗಳನ್ನು 12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಬಾಣವರ, ಗಂಜಲಗೋಡು, ಮತೀಕೆರೆ, ಹಳುವಳ್ಳಿಗಳಿಗೆ ಗ್ರಾಮ ವಿಕಾಸ ಯೋಜನೆಯಡಿ 80 ಲಕ್ಷ ರೂ.ಅನುದಾನ ನೀಡಲಾಗಿದ್ದು ಕೆಲಸ ಆರಂಭವಾಗಿದೆ ಎಂದು ಹೇಳಿದರು.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಾಲ್ಕು ಕೋಟಿ ರೂ. ನೀಡಲಾಗಿದ್ದು, ಒಟ್ಟಾರೆ ಅಂಬಳೆ ಹೋಬಳಿಗೆ 30 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಸುಮಾನಾಗೇಶ್, ಸದಸ್ಯ ರಮೇಶ್, ತಾಪಂ ಸದಸ್ಯ ಮಹೇಶ್ ಮುಖಂಡರಾದ ಹಾದಿಹಳ್ಳಿ ಪ್ರಸನ್ನ, ಲಕ್ಷ್ಮಣ್‌ಗೌಡ, ಮಹೇಂದ್ರ, ಸಚಿನ್, ಸುರೇಶ್, ಗ್ರಾಮಸ್ಥ ಪುಟ್ಟೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News