×
Ad

ಕುಶಾಲನಗರ: ನಿವೃತ್ತ ಶಿಕ್ಷಕರಿಗೆ ಸನ್ಮಾನ

Update: 2016-04-10 23:20 IST

ಕುಶಾಲನಗರ, ಎ.10: ಗುರುಗಳಿಗೆ ಈ ಸಮಾಜದಲ್ಲಿ ಉತ್ತಮ ಸ್ಥಾನ ಇದೆ. ಹರ ಮುನಿದರು ಗುರು ಹರಸುವನು, ಕಾಯುವವನು. ಗುರಿಯ ಮುಂದೆ, ಗುರು ಇದ್ದಾಗ ಆ ಕಾರ್ಯ ಸಫಲವಾಗುವುದು. ಹಾಗಾಗಿ ಶಿಕ್ಷಣ ಇಲಾಖೆಯ ಯಶಸ್ವಿ ಕಾರ್ಯಕ್ರಮದ ಹಿಂದೆ ಶಿಕ್ಷಕರ ಛಲ ಮತ್ತು ಆತ್ಮ ವಿಶ್ವಾಸ ಇದೆ ಎಂದು ನಂಜರಾಯಪಟ್ಟಣ ಕ್ಲಷ್ಟರ್‌ನ ಸಿ.ಆರ್.ಪಿ. ಸತ್ಯನಾರಾಯಣ ಹೇಳಿದ್ದಾರೆ.

    ಇಲ್ಲಿನ ಗುಡ್ಡೆಹೂಸೂರು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಂಜರಾಯಪಟ್ಟಣ ಕ್ಲಷ್ಟರ್ ವ್ಯಾಪ್ತಿಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗುಡ್ಡೆಹೂಸೂರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಣ್ಣ ಸ್ವಾಮಿಯವರು ವಹಿಸಿ, ನಿವೃತ್ತ ಶಿಕ್ಷಕರಿಗೆ ನೀಡುವ ಸನ್ಮಾನ ಸಮಾರಂಭದ ಮಹತ್ವವನ್ನು ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಗುಡ್ಡೆಹೂಸೂರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತರಾದ ಸರೋಜಾ, ನಂಜರಾಯಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ.ಪಿ. ಲೀಲಾ, ಯಾಸ್ಮೀನ್ ಸಹ ಶಿಕ್ಷಕಿ ಸೇವೆ ಸಲ್ಲಿಸಿದ ಈ ಮೂರು ಮಂದಿ ಶಿಕ್ಷಕಿಯರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ್, ಪದಾಧಿಕಾರಿಗಳಾದ ಚಂದ್ರಶೇಖರ್, ಕುಶಾಲನಗರ ಸಿ.ಆರ್.ಪಿ. ವಸಂತ್, ಸುಂಟಿಕೊಪ್ಪ ಕ್ಲಷ್ಟರ್‌ನ ಸಿ.ಆರ್.ಪಿ. ಶಶಿಕುಮಾರ್, ಬಿ.ಆರ್.ಪಿ. ಶಾಂತಕುಮಾರ್ ಭಾಗವಹಿಸಿದ್ದರು. ನಂಜರಾಯಪಟ್ಟಣ ಕ್ಲಷ್ಟರ್ ವ್ಯಾಪ್ತಿಯ ಶಾಲೆಗಳಿಂದ ಕಾರ್ಯಕ್ರಮದಲ್ಲಿ 65ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News