×
Ad

ನಾನೇ ಮುಂದಿನ ಮುಖ್ಯಮಂತ್ರಿ : ಯಡಿಯೂರಪ್ಪ

Update: 2016-04-11 19:43 IST

ಬೆಂಗಳೂರು, ಎ.11 : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ನಾನೇ ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಪಕ್ಷದ  ನೂತನ ರಾಜ್ಯಾಧ್ಯಕ್ಷ , ಸಂಸದ  ಬಿ. ಎಸ್. ಯಡಿಯೂರಪ್ಪ ಸೋಮವಾರ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. 

ನನಗೆ ಪಕ್ಷದ ಅಧ್ಯಕ್ಷತೆ ನೀಡುವಾಗ ಪಕ್ಷಾಧ್ಯಕ್ಷ ಅಮಿತ್ ಶಾ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಯಡಿಯೂರಪ್ಪ ಅವರಿಗೆ ರಾಜಾಧ್ಯಕ್ಷತೆ ನೀಡುವ ಬಗ್ಗೆ ಪಕ್ಷದ ವರಿಷ್ಠರು ಮೀನ ಮೇಷ ಎಣಿಸುತ್ತಿದ್ದರು. ಈಗ ಹಠಕ್ಕೆ ಬಿದ್ದು ಪಟ್ಟ ಪಡೆದಿರುವ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ನಾನೇ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದಾರೆ. ಇದರಿಂದ ಪಕ್ಷದೊಳಗೆ ಮತ್ತೆ ಅಪಸ್ವರ, ವಿವಾದ ಉಂಟಾಗುವ ಸಾಧ್ಯತೆ ಇದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News