ಕೊಡಗು: ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ
ಮಡಿಕೇರಿ, ಎ.11: ಕೊಡಗು ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ಈಗಾಗಲೇ ರಚನೆಯಾಗಿದ್ದು, ಕೊಡಗು ಜಿಲ್ಲಾ ದೂರು ಪ್ರಾಧಿಕಾರವು ಪದಾಧಿ ಕಾರಿಗಳನ್ನು ಹೊಂದಿರುತ್ತದೆ.
ಅಧ್ಯಕ್ಷರಾಗಿ ಪ್ರಾದೇಶಿಕ ಆಯುಕ್ತರು, ಮೈಸೂರು- 0821-2516300 ಮತ್ತು 0821-2414089, ಸದಸ್ಯ ಕಾರ್ಯದರ್ಶಿಯಾಗಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ-08272-2289000, ಸದಸ್ಯರಾಗಿ ಪುಟ್ಟಮಾದಯ್ಯ, ನಿವೃತ್ತ ಕೆ.ಎ.ಸ್ ಅಧಿಕಾರಿ(ಸೆಲೆಕ್ಷನ್‌ಗ್ರೇಡ್) ಮೈಸೂರು ಜಿಲ್ಲೆ-9481674999 ಹಾಗೂ ಸದಸ್ಯರಾಗಿ ಡಾ.ಪುಷ್ಪಕುಟ್ಟಣ್ಣ, ನಿವೃತ್ತ ಪ್ರಾಂಶುಪಾಲರು, ಹೊಸಕೇರಿ ಗ್ರಾಮ ಅರೆಕಾಡು ಅಂಚೆ, ಮಡಿಕೇರಿ-08272-230035 ಮತ್ತು 9845504537. ಎಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಹೊಂದಿರುವ ಅಧಿಕಾರ ಇಂತಿದೆ.
ಡಿಎಸ್ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ಸಿಬ್ಬಂದಿ ವರ್ಗದವರ ದುರ್ನಡತೆ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ವಿಚಾರಣೆ. ಡಿಎಸ್ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಯ ವಿರುದ್ಧದ ದೂರನ್ನು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸುವುದು. ನೇರವಾಗಿ ತೀವ್ರ ದುರ್ನಡತೆಯ ದೂರುಗಳನ್ನು ಸ್ವೀಕರಿಸಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸುವುದು.