×
Ad

ಮಡಿಕೇರಿ ಹಾಕಿ ಉತ್ಸವ:

Update: 2016-04-11 22:31 IST

ಮಡಿಕೇರಿ, ಎ.11: ಕೊಡವ ಕುಟುಂಬಗಳ ನಡುವಣ 20ನೆ ವರ್ಷದ ಶಾಂತೆಯಂಡ ಕಪ್ ಹಾಕಿ ಉತ್ಸವದ ಆರಂಭಿಕ ದಿನದಂದು ನಡೆದ ಕುತೂಹಲಕಾರಿ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮತ್ತು ವಾಕ್ ಓವರ್ ಪಡೆದ 14 ತಂಡಗಳು ಮುಂದಿನ ಸುತ್ತನ್ನು ಪ್ರವೇಶಿಸಿವೆ.

ಗೋಲಿನ ಸುರಿಮಳೆ ಕಂಡ ಕುತೂಹಲಕಾರಿ ಪಂದ್ಯದಲ್ಲಿ ಮಲಚ್ಚೀರ ತಂಡ 7-0 ಗೋಲುಗಳ ಭಾರೀ ಅಂತರದಿಂದ ಪಾಸುರ ತಂಡವನ್ನು ಮಣಿಸಿತು. ಮಲಚ್ಚೀರ ತಂಡದ ಶಾನ್ ಬೋಪಣ್ಣ 4 ಮತ್ತು ಹರ್ಷ 3 ಗೋಲುಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಮಣವಟ್ಟೀರ ತಂಡ 5-0 ಗೋಲುಗಳ ಅಂತರದಿಂದ ಅಚ್ಚಕಾಳೇರ ತಂಡದ ವಿರುದ್ಧ ಸುಲಭ ಗೆಲುವನ್ನು ದಾಖಲಿಸಿತು. ವಿಜೇತ ತಂಡದ ಪರವಾಗಿ ಮಧು ಅಯ್ಯಪ್ಪ ಮತ್ತು ಸೋಮಣ್ಣ ತಲಾ 2 ಗೋಲು ದಾಖಲಿಸಿದರೆ, ಸೋಮಣ್ಣ ಒಂದು ಗೋಲು ಗಳಿಸಿದರು.

   ಇನ್ನುಳಿದ ಪಂದ್ಯಗಳಲ್ಲಿ ನಾಗಂಡ ತಂಡ 1-0 ಗೋಲಿನಿಂದ ಬಾಚಮಂಡ ತಂಡವನ್ನು, ಪಟ್ರಪಂಡ ತಂಡ 7-6 ಗೋಲುಗಳ ಅಂತರದಿಂದ ಟೈಬ್ರೇಕರ್ ಮೂಲಕ ಅಲ್ಲಂಡ ವಿರುದ್ಧ, ಅವರೆಮಾದಂಡ 7-6 ಗೋಲುಗಳಿಂದ ಚೋಕಂಡವನ್ನು ಟೈಬ್ರೇಕರ್ ಮೂಲಕ, ಮುರುವಂಡ 3-2 ಗೋಲುಗಳಿಂದ ಕೋದಂಡವನ್ನು ಟೈಬ್ರೇಕರ್ ಮೂಲಕ, ಕಾರೇರ 7-6 ಗೋಲುಗಳಿಂದ ಮಲ್ಲೇಂಗಡವನ್ನು , ಮತ್ತಾರಂಡ 3-0 ಗೋಲುಗಳಿಂದ ಚೋಡುಮಾಡವನ್ನು, ಚೆರುಮಂದಂಡ 3-1 ಗೋಲುಗಳಿಂದ ಪಟ್ಟಮಾಡ ತಂಡವನ್ನು ಸೋಲಿಸಿದವು. ನಾಲ್ಕು ತಂಡಗಳು ಗೈರು: ಪಂದ್ಯಾವಳಿಯ ಮೊದಲ ದಿನವೇ ನಾಲ್ಕು ತಂಡಗಳು ಗೈರು ಹಾಜರಾಗುವ ಮೂಲಕ ಮೇಕತಂಡ, ಮಂಡೇಡ, ಮುಂಡಂಡ, ಅಮ್ಮಾಟಂಡ ತಂಡಗಳು ವಾಕ್ ಓವರ್ ಪಡೆದು ಮುಂದಿನ ಸುತ್ತನ್ನು ಪ್ರವೇಶಿಸಿದವು. ಹೊಟ್ಟೇಂಗಡ, ಕಾಳಚಂಡ, ಗುಡ್ಡಂಡ ಮತ್ತು ಕಲಿಯಂಡ ತಂಡಗಳು ಪಂದ್ಯಗಳಲ್ಲಿ ಭಾಗವಹಿಸದೆ ನಿರಾಸೆ ಮೂಡಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News