×
Ad

ಇಲಾಖಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

Update: 2016-04-11 23:39 IST

ಬೆಂಗಳೂರು, ಎ. 11: ಲೋಕ ಸೇವಾ ಆಯೋಗವು 2016ನೆ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಎ.16ರಿಂದ 18ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಹೊಸದಿಲ್ಲಿ ಕೇಂದ್ರ, ಎ.20ರಿಂದ 28ರವರೆಗೆ ಬೆಂಗಳೂರು, ಬೆಳಗಾವಿ, ವಿಜಯಪುರ, ಗದಗ, ಕಲಬುರಗಿ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ ಕೇಂದ್ರಗಳು ಹಾಗೂ ಹೊಸದಿಲ್ಲಿ ಕೇಂದ್ರ ಹಾಗೂ ಎ.29 ರಿಂದ ಮೇ 5ರ ವರೆಗೆ ಬೆಂಗಳೂರು ಕೇಂದ್ರದಲ್ಲಿ ನಡೆಸಲಿದೆ.

ಈ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಮತ್ತು ಅನರ್ಹ ಅಭ್ಯರ್ಥಿಗಳ ತಿರಸ್ಕೃತ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಎ.7ರಿಂದ ಆಯೋಗದ ವೆಬ್‌ಸೈಟ್ http://kpsc.kar.nic.inನ Home Page ನಲ್ಲಿ CLICK HERE TO DOWNLOAD ADMISSION TICKET FOR DEPARTMENTAL EXAMINATION 2016-I SESSION ಎನ್ನುವ LINK ಅನ್ನು ಕ್ಲಿಕ್ ಮಾಡಿ ತಮ್ಮ ಅರ್ಜಿ ಸಂಖ್ಯೆಗಳನ್ನು ನಮೂದಿಸಿ ಪ್ರವೇಶ ಪತ್ರಗಳನ್ನು ಮತ್ತು ಅಭ್ಯರ್ಥಿಗಳಿಗೆ ಸೂಚನೆಗಳು ಪ್ರತಿಯನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಆಯೋಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News