ಮೊದಲನೆ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
Update: 2016-04-11 23:43 IST
ಬೆಂಗಳೂರು, ಎ.11: ವೈದ್ಯಕೀಯ/ದಂತವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳಿಗಾಗಿ ನಡೆಸಿದ ಒಂದನೆ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದು ವೆಬ್ ಸೈಟ್: http://kea.kar.nic.inನಲ್ಲಿ ಪ್ರಕಟಿಸಿದೆ.
ಸೀಟು ಹಂಚಿಕೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಇಚ್ಛೆಯನ್ನು ಚಲಾಯಿಸಲು, ಶುಲ್ಕ ಪಾವತಿಸಲು, ಮೂಲ ದಾಖಲಾತಿಗಳನ್ನು ಸಲ್ಲಿಸಲು ಮತ್ತು ಪ್ರವೇಶಾನುಮತಿ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು ಎ.12 ರಿಂದ 21ರವರೆಗೆ 10 ದಿನಗಳು ಅವಕಾಶವಿದೆ. ಆಯಾ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಲು ಅಂತಿಮ ದಿನವಾದ ಎ. 22ರ ಸಂಜೆ 4:00ಗಂಟೆಯವರೆಗೆ ಸಮಯಾವಕಾಶವಿದೆ. ವಿವರಗಳಿಗೆ ಪ್ರಾಧಿಕಾರದ ವೆಬ್ ಸೈಟಿಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.