×
Ad

ಇಂದು ನಿಡುಮಾಮಿಡಿ ಶ್ರೀಗಳ ತಾಯಿಯ ಅಂತ್ಯಕ್ರಿಯೆ

Update: 2016-04-11 23:48 IST

ಬೆಂಗಳೂರು, ಎ.11: ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಗಿರಿಜಮ್ಮ (85) ಅವರ ಅಂತ್ಯಕ್ರಿಯೆಯು ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಡುಮಾಮಿಡಿ ಮಠದ ಜಮೀನಿನಲ್ಲಿ ಎ. 12ರಂದು, ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
 ರವಿವಾರ ಬೆಂಗಳೂರಿನಲ್ಲಿ ನಿಧನರಾದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಗಿರಿಜಮ್ಮನವರು, ಚಿತ್ರದುರ್ಗ ಮೂಲದ ಸ್ವಾತಂತ್ರ್ಯ ಯೋಧ ಸಾರಂಗಮಠದ ಗಂಗಾಧರಯ್ಯ ಅವರ ಪತ್ನಿಯಾಗಿದ್ದಾರೆ. ಅವರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಈ ಪೈಕಿ ಪರಮಶಿವ ರಾಜದೇಶಿಕೇಂದ್ರ ಅವರು ಶ್ರೀಶೈಲ ಸಾರಂಗಮಠದ ಸ್ವಾಮೀಜಿಯಾಗಿದ್ದು, ಪುತ್ರಿ ಸುನಂದಮ್ಮ ಕೂಡ ಸನ್ಯಾಸಿನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News