×
Ad

ಮುಂಬರುವ ದಿನಗಳಲ್ಲಿ ದಲಿತರು ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೇರುವುದು ನಿಶ್ಚಿತ: ಕೆ.ಹೆಚ್.ಮುನಿಯಪ್ಪ

Update: 2016-04-12 22:27 IST

ಬೆಂಗಳೂರು.ಏ.12: ಮುಂಬರುವ ದಿನಗಳಲ್ಲಿ ದಲಿತರು ರಾಜ್ಯದಲ್ಲಿ ಮುಖ್ಯಮಂತ್ರಿ ಗಾದಿಗೇರುವುದು ನಿಶ್ಚಿತ ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಶೋಷಿತರ ಪರವಾದ ಪಕ್ಷ. ದಲಿತರಿಗೆ ಮುಖ್ಯಮಂತ್ರಿ ಗಾದಿ ನೀಡಲು ಹಿಂಜರಿಯುವುದಿಲ್ಲ. ರಾಜ್ಯಕ್ಕೆ ದಲಿತ ಸಿಎಂ ಬರಬೇಕು ಎಂಬ ಕೂಗು ಹಳೆಯದು. ಅದಕ್ಕೆ ಕಾಲ ಹತ್ತಿರವಾಗಿದೆ ಎಂದರು.

ಗೃಹ ಸಚಿವ ಡಾ॥ ಜಿ.ಪರಮೇಶ್ವರ್ ಮಾತನಾಡಿ ದಲಿತರಿಗಿನ್ನೂ ಅವಮಾನ ಮಾಡುವಂತಹ ಘಟನೆಗಳು ನಡೆಯುತ್ತಲೇ ಇವೆ. ದಲಿತರಿಗೆ ಊರುಗಳಲ್ಲಿ ಕೊಟ್ಟ ಕೊನೆಯದಾಗಿ ನೀರು ಕೊಡುವ ಸ್ಥಿತಿ ಹಲವೆಡೆ ಇದೆ ಎಂದು ಅವರು ಹೇಳಿದರು.

ನಾನು ಇಲ್ಲಿಯ ತನಕ ಬಂದಿದ್ದರೂ ನನ್ನ ಹೆಸರಿನ ಮುಂದೆ ದಲಿತ ಎಂಬ ಶಬ್ಬವನ್ನು ಸೇರಿಸಲಾಗುತ್ತದೆ. ಯಾವಾಗ ನಮ್ಮ ಹೆಸರನ್ನು ದಲಿತ ಎಂಬ ಕಾರಣಕ್ಕಾಗಿ ಗುರುತಿಸುವ ಕೆಲಸ ನಿಲ್ಲುತ್ತದೆಯೋ?ಆಗ ದಲಿತರ ಉದ್ದಾರ ಆರಂಭವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News